ನೀವು ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಎಷ್ಟೊಂದು ಬಗೆಯ ಸಾರು, ಸಾಂಬಾರ್, ಹುಳಿ ಮಾಡಿರುತ್ತೀರಿ. ಅದ್ರಲ್ಲೂ ಈ ಬಿಸಿಲಿನ ವೇಲೆ ಮಧ್ಯಾಹ್ನದ ಸಮಯ ಮಸಾಲೆಗಳ ಹಾಕಿರುವ ಸಾರು, ಸಾಂಬಾರ್ ಸವಿಯುವುದಕ್ಕಿಂತ, ರಸಂ, ಮಜ್ಜಿಗೆ ಹುಳಿ ಸವಿಯಲು ಹೆಚ್ಚಿನವರು ಇಷ್ಟಪಡುತ್ತಾರೆ. ಏಕೆಂದರೆ ಈ ರೀತಿ ಸರಳ ಸಾಂಬಾರ್, ಸಾರು ದೇಹಕ್ಕೆ ತಂಪಾಗುವ ಜೊತೆಗೆ ಆರೋಗ್ಯಕ್ಕೆ ಉತ್ತಮವೂ ಹೌದು.
ಹಾಗೆ ನಾವು ಮಜ್ಜಿಗೆ ಹುಳಿ ಮಾಡುವುದು ಹೇಗೆ ಎಂಬುದನ್ನು ನಾವು ತಿಳಿದಿದ್ದೇವೆ. ನಾವಿಂದು ಸುಲಭವಾಗಿ ಅದ್ಭುತ ರುಚಿಯ ಬೆಂಡೆಕಾಯಿ ಮಜ್ಜಿಗೆ ಹುಳಿ ಸಾರು ಮಾಡುವ ಕುರಿತು ತಿಳಿದುಕೊಳ್ಳೋಣ. ಬೆಂಡೆಕಾಯಿಯಲ್ಲಿ ಮಾಡುವಂತಹ ಸಾರು, ಸಾಂಬಾರ್, ಹಾಗೆ ಪಲ್ಯ ಕೂಡ ಅದ್ಭುತ ರುಚಿ ನೀಡುತ್ತೆ. ಆರೋಗ್ಯಕ್ಕೂ ಬಹಳ ಉತ್ತಮ ಈ ಬೆಂಡೆಕಾಯಿ.
ಆದ್ರೆ ನಾವಿಂದು ಮಜ್ಜಿಗೆ ಜೊತೆಗೆ ಬೆಂಡೆಕಾಯಿ ಸಾರು ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಅನ್ನದ ಜೊತೆಗೆ ಸವಿಯಲು ಈ ಮಜ್ಜಿಗೆ ಜೊತೆಗಿನ ಬೆಂಡೆಕಾಯಿ ಸಾರು ಅದ್ಭುತ ರುಚಿಯಾಗಲಿದೆ. ಹೀಗಾಗಿ ನಾವಿಂದು ಈ ಬೆಂಡೆಕಾಯಿ ಮಜ್ಜಿಗೆ ಸಾರು ಮಾಡುವ ಕುರಿತು ನಾವು ತಿಳಿದುಕೊಳ್ಳೋಣ.
ಬೆಂಡೆಕಾಯಿ ಮಜ್ಜಿಗೆ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಸಾರು ಮಾಡಲು ಎಷ್ಟು ಸಮಯ ಹಿಡಿಯಲಿದೆ? ಬೆಂಡೆಕಾಯಿ ಮಜ್ಜಿಗೆ ಸಾರು ಮಾಡುವ ವಿಧಾನವೇನು ಎಂಬುದು ಸೇರಿ ಇತರೆ ಎಲ್ಲಾ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಬೆಂಡೆಕಾಯಿ ಮಜ್ಜಿಗೆ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬೆಂಡೆಕಾಯಿ
- ಮೊಸರು
- ತೊಗರಿ ಬೇಳೆ
- ಕರಿಬೇವಿನ ಎಲೆಗಳು
- ಸಾಸಿವೆ
- ಜೀರಿಗೆ
- ಅರಿಶಿನ ಪುಡಿ
- ಜೀರಿಗೆ
- ಹಸಿರು ಮೆಣಸಿನಕಾಯಿ
- ತೆಂಗಿನಕಾಯಿ ತುರಿ
- ಒಣ ಮೆಣಸು
- ರುಚಿಗೆ ಉಪ್ಪು
- ಎಣ್ಣೆ
ಬೆಂಡೆಕಾಯಿ ಮಜ್ಜಿಗೆ ಸಾರು ಮಾಡುವ ವಿಧಾನವೇನು?
ಮದಲು ತೊಗರಿ ಬೇಳೆಯನ್ನು ನೀರನಲ್ಲಿ ಚೆನ್ನಾಗಿ ತೊಳೆದು ಹಾಗೆ ನೆನೆಸಿಡಬೇಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತುರಿದ ತೆಂಗಿನಕಾಯಿ, ಹಸಿ ಮೆಣಸು, ಜೀರಿಗೆ, ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನಂತರ ಈ ಮಿಶ್ರಣ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಮಿಕ್ಸಿ ಜಾರ್‌ಗೆ ಮೊಸರು ಹಾಕಿ ಒಂದು ಸುತ್ತು ಹೊಡೆಸಿಕೊಂಡು ಅದನ್ನು ಕೂಡ ಮಿಶ್ರಣದ ಜೊಗೆತೆ ಹಾಕಿಕೊಳ್ಳಿ.
ಈಗ ಈ ರುಬ್ಬಿದ ಪದಾರ್ಥಗಳಿಗೆ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಹೆಚ್ಚಿಕೊಂಡಿರುವ ಬೆಂಡೆಕಾಯಿಯನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಫ್ರೈ ಮಾಡಿಕೊಳ್ಳುವುದರಿಂದ ಲೋಳೆಯ ಅಂಶ ಹೋಗುತ್ತದೆ. ಫ್ರೈ ಮಾಡುವಾಗ ಎಣ್ಣೆ ಹಾಕಿಕೊಂಡು ಮಾಡಿಕೊಳ್ಳಿ.
ಈಗ ಬೆಂಡೆಕಾಯಿ ತೆಗೆದಿಟ್ಟು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು, ಇಂಗು, ಈರುಳ್ಳಿ ಹಾಕಿ ಫ್ರೈ ಮಾಡಿ. 2 ನಿಮಿಷದ ಬಳಿಕ ಇದಕ್ಕೆ ಸ್ವಲ್ಪ ನೀರು ಹಾಕಿಕೊಂಡು ನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಮಸಾಲೆ ಪದಾರ್ಥಗಳನ್ನು ಇದಕ್ಕೆ ಹಾಕಿಕೊಂಡು 1 ನಿಮಿಷದ ಬಳಿಕ ಫ್ರೈ ಮಾಡಿಕೊಂಡಿರುವ ಬೆಂಡೆಕಾಯಿಯನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿ.
ಹಾಗೆ ಕುದಿಬರಲು ಬಿಡಬೇಕು. 3ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಕುದಿಬರಲು ಬಿಟ್ಟು ನಂತರ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ಅದ್ಭುತ ರುಚಿಯ ಈ ಬೆಂಡೆಕಾಯಿ ಮಜ್ಜಿಗೆ ಸಾರು ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.