ವಾಷಿಂಗ್ಟನ್: ಅಮೆರಿಕದ ಶಕ್ತಿ ಹಾಗೂ ಸಾಮರ್ಥ್ಯದ ಸಂಕೇತವೆಂದೇ 240 ವರ್ಷಗಳಿಗೂ ಹೆಚ್ಚು ಕಾಲದಿಂದ ಪರಿಗಣಿತವಾಗಿರುವ ಬೋಳು ಹದ್ದು (ಬಾಲ್ಡ್ ಈಗಲ್) ಇನ್ನು ಅಧಿಕೃತವಾಗಿ ಅಮೆರಿಕದ ರಾಷ್ಟ್ರ ಪಕ್ಷಿ.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು, ತಮ್ಮ ಅವಗಾಹನೆಗೆ ಬಂದಿದ್ದ ಮಸೂದೆಗೆ ಮಂಗಳವಾರ ಸಹಿ ಹಾಕಿದರು.
ಈ ಮೂಲಕ ಬಿಳಿ ತಲೆ, ಹಳದಿ ಕೊಕ್ಕು ಹಾಗೂ ಕಂದು ಬಣ್ಣದ ದೇಹದ ಬೋಳು ಹದ್ದನ್ನು ರಾಷ್ಟ್ರ ಪಕ್ಷಿ ಎಂದು ಘೋಷಿಸಬೇಕು ಎನ್ನುವ ದೀರ್ಘಾವಧಿಯ ಬೇಡಿಕೆಯು ಈಡೇರಿದಂತಾಗಿದೆ.
1972ರಿಂದಲೂ ಅಮೆರಿಕದ ಅಧಿಕೃತ ಮುದ್ರೆಯಾದ 'ಗ್ರೇಡ್ ಸೀಲ್'ನಲ್ಲಿ ಬೋಳು ಹದ್ದಿನ ಚಿತ್ರವನ್ನು ಬಳಸಲಾಗುತ್ತಿದೆ. ಆಗಿನಿಂದಲೇ ಆ ಪಕ್ಷಿಯನ್ನು ರಾಷ್ಟ್ರಪಕ್ಷಿಯಾಗಿ ಘೋಷಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿತ್ತು.