ಮಾಸ್ಕೊ: ತನ್ನ ಗಡಿಯಿಂದ ಒಂದು ಸಾವಿರ ಕಿ.ಮೀ. ದೂರದಲ್ಲಿರುವ ರಷ್ಯಾದ ಕಜಾನ್ ನಗರದ ಮೇಲೆ ಉಕ್ರೇನ್ ಶನಿವಾರ ಡ್ರೋನ್ ದಾಳಿ ನಡೆಸಿದೆ. ಬಹುಮಹಡಿ ಕಟ್ಟಡವೊಂದಕ್ಕೆ ಡ್ರೋನ್ ಅಪ್ಪಳಿಸುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ರಷ್ಯನ್ ಪಡೆಗಳು ಪೂರ್ವ ಉಕ್ರೇನ್‌ನಲ್ಲಿರುವ ಗಡಿ ಗ್ರಾಮವೊಂದನ್ನು ವಶಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಡ್ರೋನ್ ದಾಳಿಯಿಂದ ಟಾರ್ಟಾಸ್ತಾನ್ ಗಣರಾಜ್ಯದ ರಾಜಧಾನಿಯಾಗಿರುವ ಕಜಾನ್‌ನಲ್ಲಿನ ಕಟ್ಟಡಗಳಿಗೆ ಹಾನಿಯಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕಜಾನ್‌ನ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೆಲವು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಪ್ರಮುಖ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.