ಕೊಚ್ಚಿ: ರಾಜ್ಯದ ಎಂಟು ನಗರಸಭೆಗಳು ಮತ್ತು ಒಂದು ಗ್ರಾಮ ಪಂಚಾಯಿತಿಯ ವಾರ್ಡ್ ವಿಂಗಡಣೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಮಟ್ಟನ್ನೂರು, ಶ್ರೀಕಂಠಪುರಂ, ಪಾನೂರು, ಕೊಡುವಳ್ಳಿ, ಪಯ್ಯೋಳಿ, ಮುಕ್ಕಂ, ಫಾರೂಕ್ ಮತ್ತು ಪಟ್ಟಾಂಬಿ ನಗರಸಭೆ ಹಾಗೂ ಪಟಣ್ಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್‍ಗಳ ವಿಂಗಡಣೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಸ್ಥಳೀಯಾಡಳಿತ ಚುನಾವಣೆಗೂ ಮುನ್ನವೇ ರಾಜ್ಯದ ವಾರ್ಡ್ ವಿಂಗಡಣೆಯನ್ನು ಸರ್ಕಾರ ಪೂರ್ಣಗೊಳಿಸುತ್ತಿದೆ. ಇದರ ವಿರುದ್ಧ ಎಂಟು ನಗರಸಭೆಗಳ ಮುಸ್ಲಿಂ ಲೀಗ್‍ನ ಕೌನ್ಸಿಲರ್‍ಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. 2011 ರ ಜನಗಣತಿಯ ಪ್ರಕಾರ, 2015 ರಲ್ಲಿ ವಾರ್ಡ್ ವಿಂಗಡಣೆ ಮಾಡಲಾಯಿತು. ಹೊಸ ಜನಗಣತಿ ಇಲ್ಲದೆ ವಾರ್ಡ್ ವಿಂಗಡಣೆ ಸಾಧ್ಯವಿಲ್ಲ ಎಂದು ನಗರಪಾಲಿಕೆ ಸದಸ್ಯರು ವಾದಿಸಿದ್ದರು. ನ್ಯಾಯಾಲಯ ಈ ಮನವಿಯನ್ನು ಸ್ವೀಕರಿಸಿದೆ.
ಇದರೊಂದಿಗೆ, ಸರ್ಕಾರಿ ವಿಂಗಡಣೆ ಆಯೋಗದ ಆದೇಶದಂತೆ ಮಾಡಿದ ವಾರ್ಡ್‍ಗಳ ವಿಂಗಡಣೆ ಕಾನೂನುಬಾಹಿರ ಮತ್ತು ನಿಯಮಾವಳಿಗಳನ್ನು ಅನುಸರಿಸಿಲ್ಲ ಎಂದು ನ್ಯಾಯಾಲಯವು ಬೊಟ್ಟುಮಾಡಿದೆ. 2015ರಲ್ಲಿ ವಾರ್ಡ್ ವಿಂಗಡಣೆ ನಡೆದಿದ್ದರೂ ಆಗ ಪಂಚಾಯಿತಿ ವಿಂಗಡಣೆಯನ್ನು ನ್ಯಾಯಾಲಯ ತಡೆದಿರಲಿಲ್ಲ. ಆದರೆ ಈ ಬಾರಿ ನಗರಸಭೆಗಳಲ್ಲಿ ವಿಭಜನೆ ತಪ್ಪಿರುವುದು ಕಂಡು ಬಂದಿದೆ.
ಹಲವು ಪಂಚಾಯಿತಿ, ನಗರಸಭೆಗಳಲ್ಲಿ ವಾರ್ಡ್ ವಿಂಗಡಣೆ ಕುರಿತು ವ್ಯಾಪಕ ದೂರುಗಳಿವೆ. ಇದೇ ವೇಳೆ ಸರ್ಕಾರಕ್ಕೆ ನ್ಯಾಯಾಲಯದಿಂದ ಹಿನ್ನಡೆಯಾಗಿದೆ.