ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲಿಕ್ಕೋಡ್ ಏಚಿಕೊವ್ವಲ್ ಪ್ರದೇಶದಲ್ಲಿ ಬೈಕಲ್ಲಿ ಆಗಮಿಸಿದ ತಂಡ ಪಿ.ಶಾರದಾ ಎಂಬವರ ಒಂದೂಮುಕ್ಕಾಳು ಪವನಿನ ಚಿನ್ನದ ಸರ ಕಸಿದು ಪರಾರಿಯಾಘಿದ್ದು, ಇವರ ಸಿಸಿ ಕ್ಯಾಮರಾ ದೃಶ್ಯಾವಳಿ ಹಲವು ದಿವಸಗಳ ನಂತರ ಪೊಲೀಸರಿಗೆ ಲಭಿಸಿದೆ.
ಡಿ. 7ರಂದು ಕಳವು ನಡೆದಿದ್ದು, ಆರೋಪಿಗಳನ್ನು ಕೊಯಂಬತ್ತೂರು ನಿವಾಸಿಗಳೆಂದು ಸಂಶಯಿಸಲಾಗಿದ್ದು, ಇವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ನಕಲಿ ನಂಬರ್‍ಪ್ಲೇಟ್ ಅಳವಡಿಸಿ ಬೈಕ್‍ಗಳಲ್ಲಿ ಸುತ್ತಾಡುವ ತಂಡ, ಒಂಟಿ ಮಹಿಳೆಯರ ಕತ್ತಿನಿಂದ ಸರಕಸಿದು ಪರಾರಿಯಾಗುತ್ತಿರುವುದಾಗಿ ಮಾಹಿತಿಯಿದೆ.