ನಾವು ನಿತ್ಯ ಸೇವಿಸುವಂತಹ ತರಕಾರಿಗಳು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ನಾವು ನೋಡಿದ್ದೇವೆ. ತರಕಾರಿ, ಸೊಪ್ಪು ನಮಗೆ ಎಷ್ಟು ಮುಖ್ಯವೋ ಆ ಆಹಾರಗಳು ಹೈಜನಿಕ್ ಆಗಿರುವುದು ಕೂಡ ಒಳ್ಳೆಯದು. ಆದ್ರೆ ನಾವು ಮನೆಯಲ್ಲಿಟ್ಟ ತರಕಾರಿಗಳು ಕೆಲವೊಮ್ಮೆ ಬಾಡಿ ಹೋಗುವುದು, ಮೊಳಕೆ ಬರುವುದು ನಾವು ನೋಡಿರುತ್ತೇವೆ.
ಹೆಚ್ಚಾಗಿ ಈರುಳ್ಳಿ, ಆಲೂಗಡ್ಡೆ ಇಂತಹ ಕೆಲವು ತರಕಾರಿಗಳು ಆಗಾಗ ಮೊಳಕೆ ಬರುವುದು ನೋಡುತ್ತೇವೆ. ಹಾಗಾದ್ರೆ ಈ ಮೊಳಕೆ ಬಂದಿರುವ ತರಕಾರಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತಿದೆ. ಹಾಗಾದ್ರೆ ಮೊಳಕೆ ಬಂದಿರುವ ಆಲೂಗಡ್ಡೆ ಸೇವಿಸಿದರೆ ಏನಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಳಕೆಯೊಡೆದ ಆಲೂಗಡ್ಡೆ ವಿಷಕಾರಿ ಮತ್ತು ಫುಡ್ ಪಾಯಿಸನ್‌ಗೆ ಕಾರಣವಾಗಬಹುದಂತೆ. ಮೊಳಕೆ ಬಂದ ಆಲೂಗಡ್ಡೆಯು ಹಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತಿರುತ್ತವೆ, ಅವು ನಮ್ಮ ಆರೋಗ್ಯಕ್ಕೆ ಉತ್ತಮ ಅಲ್ಲವೇ ಅಲ್ಲ. ಅದನ್ನು ಅಡುಗೆಗೆ ಬಳಸುವ ಬದಲಾಗಿದೆ ಎಸೆಯುವುದೇ ಬಹಳ ಉತ್ತಮ ಎಂದು ತಜ್ಞರು ಹೇಳುತ್ತಾರೆ.
ಆಲೂಗಡ್ಡೆಗಳು ಸೋಲನೈನ್ ಮತ್ತು ಚಾಕೋನೈನ್‌ನ ಎಂಬ ಅಂಶಗಳ ನೈಸರ್ಗಿಕ ಮೂಲವಾಗಿದೆ - ಎರಡು ಗ್ಲೈಕೋಲ್ಕಲಾಯ್ಡ್ ಸಂಯುಕ್ತಗಳು ನೈಸರ್ಗಿಕವಾಗಿ ಬದನೆಕಾಯಿಗಳು ಮತ್ತು ಟೊಮೆಟೊಗಳು ಸೇರಿದಂತೆ ವಿವಿಧ ಇತರ ಆಹಾರಗಳಲ್ಲಿ ಕಂಡುಬರುತ್ತವೆ. ಪ್ರತಿಜೀವಕ ಗುಣಲಕ್ಷಣಗಳು ಮತ್ತು ರಕ್ತ-ಸಕ್ಕರೆ- ಮತ್ತು ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಅಂಶಗಳನ್ನು ಒಳಗೊಂಡಿರುತ್ತದೆ. ಆದ್ರೆ ಮೊಳಕೆ ಬಂದ ಆಲೂಗಡ್ಡೆಯಲ್ಲಿ ಈ ಸಂಯುಕ್ತಾಂಶಗಳ ಪ್ರಮಾಣ ಏರಿಳಿತವಾಗಿರುತ್ತೆ. ಇದನ್ನು ಸೇವಿಸಿದಾಗ ಅಪಾಯ ಎದುರಾಗಬಹುದು.
ಇನ್ನು ಆಲೂಗಡ್ಡೆ ಹಸಿರು ಬಣ್ಣಕ್ಕೆ ತಿರುಗುವುದು ಸಹ ನಾವು ನೋಡಿದ್ದೇವೆ. ಇದು ವಿಷಕಾರಿಯಲ್ಲ ಆದರೆ ವ್ಯವಹರಿಸಬೇಕಾದ ಹೆಚ್ಚುವರಿ ಗ್ಲೈಕೋಲ್ಕಲಾಯ್ಡ್ ಸಾಂದ್ರತೆಯ ಸೂಚನೆಯಾಗಿದೆ. ಆಲೂಗಡ್ಡೆ ಮೊಳಕೆಯೊಡೆಯಲು ಪ್ರಾರಂಭಿಸಿದಾಗ, ಅದರ ಗ್ಲೈಕೋಲ್ಕಲಾಯ್ಡ್ ಅಂಶವು ಹೆಚ್ಚಾಗಲು ಪ್ರಾರಂಭಿಸುತ್ತದೆ, ಇದು ನಿಮ್ಮ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.
ಹೀಗಾಗಿ ಕೆಲವೊಮ್ಮೆ ಈ ಮೊಳಕೆ ಬಂದ ಆಲೂಗಡ್ಡೆ ಸೇವಿಸಿದಾಗ ಬಾಂತಿ, ವಾಕರಿಕೆ, ತಲೆನೋವು, ಅತಿಸಾರದಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಲ್ಲಿ ಸೋಲನೈಸ್ ಎಂಬ ವಿಷಕಾರಿ ಅಂಶ ಉತ್ಪತ್ತಿಯಾಗುವುದು ಇದಕ್ಕೆಲ್ಲ ಕಾರಣವಾಗುತ್ತದೆ.
ಸೋಲನೈನ್ ನಮ್ಮ ದೇಹ ಸೇರಿದಾಗ ಆಗುವ ದುಷ್ಪರಿಣಾಮಗಳೇನು?
ಕಡಿಮೆ ರಕ್ತದೊತ್ತಡ
ಅಧಿಕ ಜ್ವರ
ತಲೆನೋವು
ಗೊಂದಲ
ವಾಂತಿ
ಅತಿಸಾರ
ಸಾವು
ಮೊಳಕೆ ಬಂದ ಆಲೂಗಡ್ಡೆಯಿಂದ ವಿಷಕಾರಿ ಅಂಶ ತೆಗೆಯುವುದು ಹೇಗೆ?
ಮೊಳಕೆ ಬಂದು ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯನ್ನು ಬಳಸವುದಕ್ಕಿಂತ ಎಸೆಯುವುದು ಉತ್ತಮ. ಆದ್ರೆ ಈ ಮೊಳಕೆಯೊಡೆದ ಭಾಗವನ್ನು ಆಳವಾಗಿ ಕತ್ತರಿಸಬೇಕು. ಹಾಗೆ ಅದನ್ನು ಬಿಸಿ ನೀರಿನಿಂದ ತೊಳೆಯಬೇಕು. ಹೀಗೆ ಮಾಡಿ ಚೆನ್ನಾಗಿ ಕುದಿಸಿ ಮಾಡಿದ ಸಾರು ಆರೋಗ್ಯದ ಮೇಲೆ ಪ್ರಭಾವ ಬೀರುವುದಿಲ್ಲ.
ಹಾಗೆ ಈ ಆಲೂಗಡ್ಡೆಯನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಇಡಬೇಡಿ. ಅಲ್ಲದೆ ಫ್ರಿಡ್ಜ್‌ನಲ್ಲಿ ಇಟ್ಟರೂ ಕೂಡ ಮೊಳಕೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ನೆಲದಲ್ಲಿ ಇದನ್ನು ಇಡಬೇಕು. ಆಲೂಗಡ್ಡೆ ತಂಪಾದ ವಾತಾವರಣದಲ್ಲಿ ಇಡಬೇಕು. ಆಲೂಗಡ್ಡೆ ನೇರ ಸೂರ್ಯನ ಬೆಳಕಿನಿಂದ ದೂರವಿದೆ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಸೋಲನೈನ್ ಸಂಗ್ರಹವಾಗುತ್ತದೆ.