ಕಾಸರಗೋಡು: ಆರೋಗ್ಯ ಇಲಾಖೆಯಿಂದ ಬುಡಕಟ್ಟು ಯಾ ಕರಾವಳಿ ಪ್ರದೇಶಗಳಲ್ಲಿನ ಸಂಸ್ಥೆಗಳ ಅಭಿವೃದ್ಧಿಗೆ ಮೀಸಲಿಟ್ಟ ಮೊತ್ತ ಬಳಸಿಕೊಂಡು ಪರಪ್ಪ ಬ್ಲಾಕ್ ಪಂಚಾಯಿತಿಯಲ್ಲಿ ಆರಂಭಿಸಲಾದ ನೂತನ ಒಪಿ ಬ್ಲಾಕ್ ಕಟ್ಟಡವನ್ನು ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಇಲಾಖೆ ಸಚಿವೆ ಜೆ. ಚಿಂಚುರಾಣಿ ಉದ್ಘಾಟಿಸಿದರು.
ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ, ಕುಟುಂಬ ಆರೋಗ್ಯ ಕೇಂದ್ರಗಳಿಂದ ತೊಡಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ವರೆಗೆ ಮೂಲಸೌಕರ್ಯ ಹೆಚ್ಚಿಸುವುದರ ಜತೆಗೆ ಜನಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಸರ್ಕಾರ ಪ್ರಥಮ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದರು.
ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಎಂ.ರಾಜಗೋಪಾಲನ್ ಶಾಸಕ ಲ್ಯಾಬ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಔಷಧಾಲಯ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜು ಕಟ್ಟಕ್ಕಯಂ, ಗಿರಿಜಾ ಮೋಹನ್, ಜೋಸೆಫ್ ಮುತ್ತೋಳಿಲ್, ಪ್ರಸನ್ನ ಪ್ರಸಾದ್, ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ. ಭೂಪೇಶ್, ಜಿಪಂ ಸದಸ್ಯರಾದ ಜೋಮೊಂಜೊಸ್, ಶಿನೋಜ್‍ಚಾಕೋ, ಸಿ.ಜೆ.ಸಜಿತ್, ಪರಪ್ಪ ಬ್ಲಾಕ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಪದ್ಮಕುಮಾರಿ, ಪರಪ್ಪ ಬ್ಲಾಕ್ ಪಂಚಾಯಿತಿ ಸದಸ್ಯರಾದ ಸಿ. ರೇಖಾ, ಶೋಬಿ ಜೋಸೆಫ್, ಉಪ ಡಿಎಂಒ ಡಾ.ಶಾನ್‍ಟಿ, ಪರಪ್ಪ ಬ್ಲಾಕ್ ಕಾರ್ಯದರ್ಶಿ ಸಿ.ಎಂ ಸುಹಾಸ್, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಮತ್ತು ವ್ಯಾಪಾರಿ ಪ್ರತಿನಿಧಿಗಳಾದ ಎ. ಅಪ್ಪುಕುಟ್ಟನ್, ಎಂ.ವಿ.ಜೋಸೆಫ್, ಎನ್. ಪುಷ್ಪರಾಜ್, ಪಿ.ಟಿ.ನಂದಕುಮಾರ್, ಪ್ರಿನ್ಸ್ ಜೋಸೆಫ್, ಎಸಿ ಲತೀಫ್, ಕೆ. ಉತ್ತಮನ್, ಬಿಜು ತುಳಿಸ್ಸೇರಿ, ಥಾಮಸ್ ಚೆರಿಯನ್ ಮತ್ತಿತರರು ಭಾಗವಹಿಸಿದ್ದರು.