ಬದಿಯಡ್ಕ: ಫೆಂಗಲ್ ಚಂಡ ಮಾರುತದ ಪ್ರಭಾವದಿಂದಾಗಿ ಜಿಲ್ಲೆಯಲ್ಲಿ ಸೋಮವಾರ ಅಪರಾಹ್ನದಿಂದ ಸುರಿಯ ತೊಡಗಿದ ಮಳೆ ಮಂಗಳವಾರ ಮಧ್ಯಾಹ್ನ ವರೆಗೆ ಅವ್ಯಾಹತವಾಗಿ ಮುಂದುವರಿದು, ಬಳಿಕ ಮಳೆ ಕುಸಿಯತೊಡಗಿತು.’
ಹಠಾತ್ ಮಳೆಯ ಕಾರಣ ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಅವರು ಸೋಮವಾರ ಸಂಜೆಯೇ ತುರ್ತು ಆದೇಶಗಳನ್ನು ಹೊರಡಿಸಿ, ಜಾಗ್ರತಾ ನಿರ್ದೇಶಾನುಸಾರ ಮಂಗಳವಾರ ಕೆಂಗಲ್ಲು ಕ್ವಾರೆ ಕಾರ್ಯಾಚರಿಸದಂತೆ ಆದೇಶ ನೀಡಿದ್ದರು. ಜಿಲ್ಲೆಯಲ್ಲಿ ಭಾನುವಾರ ಹಾಗೂ ಸೋಮವಾರ ಕ್ವಾರೆಗಳು ಕಾರ್ಯನಿರ್ವಹಿಸದಂತೆ ಈ ಹಿಂದೆಯೇ ಸರ್ಕಾರ ಆದೇಶಿಸಿರುವ ಬೆನ್ನಿಗೇ ಇದೀಗ ಮಳೆಯ ಕಾರಣ ಮಂಗಳವಾರವೂ ನಿಷೇಧ ಹೇರಿರುವುದು ನಿರ್ಮಾಣ ವಲಯವನ್ನು ಸಂಕಷ್ಟಕ್ಕೊಳಪಡಿಸಿತು.
ಈಗಾಗಲೇ ಕೆಂಗಲ್ಲು ವಲಯದಲ್ಲಿ ಕಾರ್ಮಿಕರ ಕೊರತೆಯಿದ್ದು, ನಿರ್ಮಾಣ ವಲಯದ ನಿರ್ವಹಣೆ ತ್ರಾಸದಾಯಕವಾಗಿ ಮುಂದುವರಿಯುತ್ತಿದೆ. ಸಿಮೆಂಟ್, ಕಬ್ಬಿಣಗಳ ಸಹಿತ ಇತರ ವಸ್ತುಗಳ ಬೆಲೆ ಏರಿಕೆಯ ಮಧ್ಯೆ ಅಕಾಲಿಕ ಮಳೆ ಕಾರ್ಮಿಕರನ್ನು ಹೌರಾಣಗೊಳಿಸಿರುವುದಾಗಿ ಅವಲತ್ತುಕೊಳ್ಳಲಾಗಿದೆ.