ಲಾಸ್ ಏಂಜಲೀಸ್: ದಕ್ಷಿಣ ಕೊರಿಯಾದ ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ 179 ಮಂದಿ ಸಾವಿಗೀಡಾಗಿದ್ದರು. ಈ ನಡುವೆ ಮತ್ತೊಂದು ವಿಮಾನ ಅಪಘಾತ ಸ್ವಲ್ಪದರಲ್ಲಿಯೇ ತಪ್ಪಿದೆ. ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ವಿಮಾನವೊಂದು ರನ್‌ವೇನಲ್ಲಿದ್ದಾಗ ಮತ್ತೊಂದು ಪ್ರಯಾಣಿಕ ವಿಮಾನ ಟೇಕ್ ಆಫ್ ಆಗುತ್ತಿತ್ತು. ಈ ವೇಳೆ ರನ್‌ವೇನಲ್ಲಿದ್ದ ವಿಮಾನವನ್ನು ಗಮನಿಸಿದ ಏರ್ ಟ್ರಾಫಿಕ್ ಕಂಟ್ರೋಲರ್‌ಗಳು ತುರ್ತಾಗಿ ನಿಲ್ಲಿಸು, ನಿಲ್ಲಿಸು, ನಿಲ್ಲಿಸು! ಎಂದು ಪೈಲಟ್‌ಗೆ ಎಚ್ಚರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ 'ಎನ್‌ಡಿ ಟಿವಿ' ವರದಿ ಮಾಡಿದೆ.
ಶುಕ್ರವಾರ ಮಧ್ಯಾಹ್ನ 4:30ರ(ಸ್ಥಳೀಯ ಕಾಲಮಾನ) ಸುಮಾರಿಗೆ, ಗೊನ್ಜಾಗಾ ವಿಶ್ವವಿದ್ಯಾಲಯದ ಬಾಸ್ಕೆಟ್‌ಬಾಲ್ ತಂಡವನ್ನು ಹೊತ್ತ ಕೀ ಲೈಮ್ ಏರ್ ಫ್ಲೈಟ್ 563 ರನ್‌ವೇನಲ್ಲಿದ್ದಾಗ ಎಂಬ್ರೇರ್ ERJ-135 ವಿಮಾನ ಟೇಕ್ ಆಫ್ ಆಗುತ್ತಿತ್ತು.
ಇದನ್ನು ಗಮನಿಸಿದ ಟ್ರಾಫಿಕ್ ಕಂಟ್ರೋಲರ್‌ಗಳು ಕೀ ಲೈಮ್ ಏರ್ ಫ್ಲೈಟ್ 563 ರನ್‌ವೇ ದಾಟದಂತೆ ಆದೇಶಿಸಿದರು. ಇದರಿಂದ ಭಾರಿ ದುರಂತವೊಂದು ತಪ್ಪಿತು.
ಘಟನೆಯ ಬಗ್ಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತನಿಖೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.