ಕುಂಬಳೆ: ಶಿರಿಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಿಜೆಪಿ ಮುಖಂಡರೊಬ್ಬರು ಮೃತಪಟ್ಟಿದ್ದಾರೆ.
ಬಿಜೆಪಿ ನಾಯಕ ಧನರಾಜ್ ಪ್ರತಾಪನಗರ (40) ಮೃತಪಟ್ಟ ವ್ಯಕ್ತಿ. ಬಿಜೆಪಿ ಕುಂಬ್ಳೆ ಮಂಡಲ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಗೆ ದುಡಿಯುತ್ತಿದ್ದರು.
ಇಂದು(ಶನಿವಾರ) ಮಧ್ಯಾಹ್ನ ಸುಮಾರು 2ಗಂಟೆಯ ಸುಮಾರಿಗೆ ರಾ. ಹೆ. ಯ ಶಿರಿಯದಲ್ಲಿ ಅಪಘಾತ ಸಂಭವಿಸಿದ ಕೂಡಲೇ ಗಾಯಾಳುವನ್ನು ಬಂದ್ಯೋಡು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕೊಂಡೊಯ್ದು ಮಹಜರು ನಡೆಸಲಾಯಿತು.
ಉಪ್ಪಳ ಪ್ರತಾಪನಗರದ ಬೀಟ್ಟಿಗದ್ದೆ ನಿವಾಸಿ ಲೋಕಯ್ಯ ಪೂಜಾರಿ, ರೇವತಿ ದಂಪತಿಯ ಪುತ್ರನಾದ ಧನ್ ರಾಜ್ ಈ ಹಿಂದೆ ಭಾರತೀಯ ಜನತಾ ಯುವಮೋರ್ಚಾ ಮಂಡಲ ಕಾರ್ಯದರ್ಶಿ, ಜಿಲ್ಲಾ ಕಾರ್ಯದರ್ಶಿಯಾಗಿ ದುಡಿದಿದ್ದರು. ಅಪಘಾತ ಸುದ್ದಿ ತಿಳಿದು ನಾಯಕರು ಸಹಿತ ಕಾರ್ಯಕರ್ತರು ಮಂಗಲ್ಪಾಡಿ ಆಸ್ಪತ್ರೆಗೆ ಧಾವಿಸಿದ್ದಾರೆ.
ಧನರಾಜ್ ಅವರು ಈ ಹಿಂದೆ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಪ್ರಸ್ತುತ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಪಘಾತದ ಮಾಹಿತಿ ತಿಳಿದ ಬಿಜೆಪಿ-ಯುವಮೋರ್ಚಾ ಕಾರ್ಯಕರ್ತರು ಆಸ್ಪತ್ರೆಗೆ ಆಗಮಿಸಿದ್ದಾರೆ. ಇವರು ದಿವಂಗತ ಲೋಕಯ್ಯ ಪೂಜಾರಿ ಮತ್ತು ರೇವತಿ ದಂಪತಿಯ ಪುತ್ರ. ಸಹೋದರರು: ಕಿಶೋರ್ ಮತ್ತು ಜಗದೀಶ್ ಅವರನ್ನು ಅಗಲಿದ್ದಾರೆ.