ಮುಳ್ಳೇರಿಯ :ಚೇಳು ಕಡಿದು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮುಳ್ಳೇರಿಯ ನಾಟೆಕಲ್ಲು ಸನಿಹದ ಕುದ್ವ ನಿವಾಸಿ ದಿ. ರಾಮಣ್ಣ ಎಂಬವರ ಪುತ್ರ ರಾಜೇಶ್(42)ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಮನೆ ಅಂಗಳದಲ್ಲಿ ರಾಜೇಶ್ ಅವರಿಗೆ ಚೇಳು ಕಚ್ಚಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಇವರ ಸಹೋದರ ಸಂತೋಷ್ ಮೂರು ತಿಂಗಳ ಹಿಂದೆಯಷ್ಟೆ ಹೃದಯಾಘಾತದಿಂದ ನಿಧನರಾಗಿದ್ದರು.