ಜನಪ್ರಿಯ ಮತ್ತು ಅತಿ ಹೆಚ್ಚು ಬಳಕೆಯಲ್ಲಿರುವ ವಾಟ್ಸ್ಆಪ್ (WhatsApp) ಈ ವರ್ಷದ ಆರಂಭದಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸಿದ್ದು ಅದು ಬಳಕೆದಾರರಿಗೆ ಪಾಸ್‌ವರ್ಡ್ ಹೊಂದಿಸುವ ಮೂಲಕ ಅಥವಾ ಫೇಸ್ ಅನ್‌ಲಾಕ್ ಅಥವಾ ಫಿಂಗರ್‌ಪ್ರಿಂಟ್‌ನಂತಹ ಬಯೋಮೆಟ್ರಿಕ್ ದೃಢೀಕರಣ ವಿಧಾನಗಳನ್ನು ಬಳಸಿಕೊಂಡು ವೈಯಕ್ತಿಕ ಚಾಟ್‌ಗಳನ್ನು ಲಾಕ್ ಮಾಡಲು ಅವಕಾಶ ಮಾಡಿಕೊಟ್ಟಿತು.
ಕಳೆದ ತಿಂಗಳು ಮೆಟಾ-ಮಾಲೀಕತ್ವದ ಮೆಸೇಜ್ ಅಪ್ಲಿಕೇಶನ್ ಲಾಕ್ ಮಾಡಿದ ಚಾಟ್‌ಗಳನ್ನು ಪ್ರವೇಶಿಸಲು ಬಳಕೆದಾರರಿಗೆ ಸೀಕ್ರೇಟ್ ಕೋಡ್ ಅನ್ನು ಹೊಂದಿಸಲು ಅವಕಾಶ ನೀಡುವ ಮೂಲಕ ಚಾಟ್ ಅನ್ನು ಪ್ರೈಮರಿ ಸ್ಕ್ರೀನ್ ಮೇಲಿಂದ ಮರೆಮಾಡುವ ಸಾಮರ್ಥ್ಯವನ್ನು ಪರಿಚಯಿಸಿದೆ. ಒಟ್ಟಾರೆಯಾಗಿ ನಿಮ್ಮ ಪರ್ಸನಲ್ ವಾಟ್ಸ್ಆಪ್ ಚಾಟ್‌ಗಳನ್ನು ಯಾರು ನೋಡದಂತೆ ಲಾಕ್ ಮಾಡೋದು ಹೇಗೆ ಎಂಬುದನ್ನು ಈ ಕೆಳಗೆ ತಿಳಿಯಿರಿ.
ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಲಾಕ್ ಮಾಡಲು ಬಯಸುವ ಚಾಟ್ ಅನ್ನು ದೀರ್ಘವಾಗಿ ಒತ್ತಿರಿ.
ಸ್ಕ್ರೀನ್ ಮೇಲಿನ ಬಲಭಾಗದಲ್ಲಿ ಗೋಚರಿಸುವ ಮೂರು-ಡಾಟ್ ಮೆನುವನ್ನು ಒತ್ತಿ ಮತ್ತು ‘ಲಾಕ್ ಚಾಟ್’ ಅನ್ನು ಟ್ಯಾಪ್ ಮಾಡಿ.
‘ಮುಂದುವರಿಸಿ’ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಅನ್‌ಲಾಕ್ ಬಳಸಿ ದೃಢೀಕರಿಸಿ ಅಷ್ಟೆ ನಿಮ್ಮ ಚಾಟ್ ಅನ್ನು ಈಗ ಲಾಕ್ ಮಾಡಲಾಗುತ್ತದೆ.
ವಾಟ್ಸಾಪ್‌ನಲ್ಲಿ ಚಾಟ್ ಟ್ಯಾಬ್‌ನಲ್ಲಿ ಸ್ವೈಪ್ ಮಾಡುವ ಮೂಲಕ ಮತ್ತು ‘Locked Chats’ ಬಟನ್ ಮೇಲೆ ಟ್ಯಾಪ್ ಮಾಡುವ ಮೂಲಕ ಇದನ್ನು ಪ್ರವೇಶಿಸಬಹುದು. ಬಳಕೆದಾರರು ತಮ್ಮ ಲಾಕ್ ಆಗಿರುವ ಚಾಟ್‌ಗಳನ್ನು ತ್ವರಿತವಾಗಿ ಹುಡುಕಲು ಮತ್ತು ಅನ್‌ಲಾಕ್ ಮಾಡಲು ಸೀಕ್ರೇಟ್ ಕೋಡ್ ಅನ್ನು ಹೊಂದಿಸಲು ವಾಟ್ಸಾಪ್ ವಾಟ್ಸ್ಆಪ್ (WhatsApp) ಅನುಮತಿಸುತ್ತದೆ. ಈ ಕೋಡ್ ನಿಮ್ಮ ಸಾಧನವನ್ನು ಅನ್‌ಲಾಕ್ ಮಾಡಲು ನೀವು ಬಳಸುವ ಕೋಡ್‌ಗಿಂತ ಭಿನ್ನವಾಗಿದೆ ಮತ್ತು ಬಳಕೆದಾರರು ಅದನ್ನು ಹಸ್ತಚಾಲಿತವಾಗಿ ಹೊಂದಿಸುವ ಅಗತ್ಯವಿದೆ.
ಲಾಕ್ ಆಗಿರುವ ಚಾಟ್‌ಗಳಿಗಾಗಿ ‘ಸೀಕ್ರೇಟ್ ಕೋಡ್’ ಅನ್ನು ಹೊಂದಿಸುವುದು ಹೇಗೆ?
ಮೊದಲಿಗೆ ಈ ‘ಸೀಕ್ರೆಟ್ ಕೋಡ್’ ವೈಶಿಷ್ಟ್ಯವನ್ನು ಬಳಸಲು ಈಗಾಗಲೇ ನೀವು ‘ಲಾಕ್ ಮಾಡಿರುವ ಚಾಟ್ಸ್’ ವಿಂಡೋಗೆ ಹೋಗಿ.
ಈಗ ‘ಸೀಕ್ರೆಟ್ ಕೋಡ್’ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಸೀಕ್ರೇಟ್ ಕೋಡ್ ರಚಿಸಲು ವಾಟ್ಸ್ಆಪ್ (WhatsApp) ನಿಮ್ಮನ್ನು ಕೇಳುತ್ತದೆ. ಇದು ಎಮೋಜಿ ಅಥವಾ ಕನಿಷ್ಠ 4 ಅಕ್ಷರಗಳನ್ನು ಹೊಂದಿರುವ ಪದವಾಗಿರಬಹುದು.
ಈ ಸೀಕ್ರೇಟ್ ಕೋಡ್ ಅನ್ನು ಟೈಪ್ ಮಾಡಿ ‘ಸರಿ’ ಬಟನ್ ಅನ್ನು ಒತ್ತಿ ಅಷ್ಟೇ.
ಅನ್‌ಲಾಕ್ ಮಾಡಲು ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.
ನಿಮಗೆ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಅನ್‌ಲಾಕ್ ಆಯ್ಕೆಗಳನ್ನು ಬಳಸಲು ಸಾಧ್ಯವಾಗದಿದ್ದಲ್ಲಿ ಲಾಕ್ ಮಾಡಿದ ಚಾಟ್‌ಗಳ ವಿಭಾಗವನ್ನು ಅನ್‌ಲಾಕ್ ಮಾಡಲು ನೀವು ಇದೀಗ ಹೊಂದಿಸಿರುವ ಸೀಕ್ರೇಟ್ ಕೋಡ್ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ. ವಾಟ್ಸ್ಆಪ್ (WhatsApp) ನೀವು ಚಾಟ್ ಲಾಕ್ ಸೆಟ್ಟಿಂಗ್‌ಗಳಿಂದ ‘ಲಾಕ್ ಮಾಡಿದ ಚಾಟ್‌ಗಳನ್ನು ಮರೆಮಾಡಿ’ ಟಾಗಲ್ ಅನ್ನು ಆನ್ ಮಾಡಿದರೆ ಚಾಟ್ ಅನ್ನು ಈ ಚಾಟ್ ಪಟ್ಟಿಯಿಂದಲೂ ಕಣ್ಮರೆಯಾಗುತ್ತದೆ. ಅವುಗಳನ್ನು ನೋಡಲು ನೀವು ಸರ್ಚ್ ಬಾರ್‌ನಲ್ಲಿ ಹೊಂದಿಸಲಾದ ಸೀಕ್ರೇಟ್ ಕೋಡ್ ಅನ್ನು ಟೈಪ್ ಮಾಡಬೇಕಾಗುತ್ತದೆ ಅಷ್ಟೇ.