ಹೌದು, ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್‌ನಲ್ಲಿ Train ಟಿಕೆಟ್ ಬುಕ್ ಮಾಡಲು ಹಲವು ಅಪ್ಲಿಕೇಶನ್‌ಗಳು ಕಾಣಬಹುದು. ಆದರೆ ಕೆಲವು ಆಪ್‌ಗಳು ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸುಲಭ ಮಾಡಿವೆ. ಗ್ರಾಹಕರು ತಮ್ಮ ಮೊಬೈಲ್ ಮೂಲಕವೇ ಟಿಕೆಟ್ ಬುಕ್ ಮಾಡಲು ನೆರವಾಗಿವೆ.
IRCTC ರೈಲ್ ಕನೆಕ್ಟ್ ಆಪ್
IRCTC ಆಪ್ ಇಲಾಖೆಯ ಅಧಿಕೃತ ರೈಲು (IRCTC Rail Connect) ಬುಕಿಂಗ್ ಆಪ್ ಇದಾಗಿದೆ. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಬ್ಬರಿಗೂ ಲಭ್ಯವಿದೆ. ಆಪ್ ಸರಳ ವಿನ್ಯಾಸ ಮತ್ತು ಬಳಸಲು ಸುಲಭವಾದ ಇಂಟರ್ಫೇಸ್ ಅನ್ನು ಹೊಂದಿದ್ದು, ಗ್ರಾಹಕರ ಸ್ನೇಹಿ ಎನಿಸಿದೆ. ಇದರಲ್ಲಿ ಸೀಟ್ ಲಭ್ಯತೆ, ತತ್ಕಾಲ್ ರೈಲು ಟಿಕೆಟ್, PNR ಸ್ಟೇಟಸ್ ಹಾಗೂ ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಕಾಯ್ದಿರಿಸಲು ಈ ಆಪ್ ಬೆಸ್ಟ್ ಎನಿಸುತ್ತದೆ.
ಕನ್ಫರ್ಮ್ ಟಿಕೆಟ್ ಆಪ್
ಕನ್ಫರ್ಮ್ ಟಿಕೆಟ್ (ConfirmTkt) ರೈಲ್ವೆಯ ಇಲಾಖೆಯ ಅಧಿಕೃತ IRCTC ಯ ಪಾಲುದಾರ ರೈಲು ಆಪ್ ಆಗಿದ್ದು, ಇತ್ತೀಚಿಗೆ ಹೆಚ್ಚು ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ. ಈ ಅಪ್ಲಿಕೇಶನ್ ಕೂಡಾ ಎಲ್ಲಾ ಅಗತ್ಯ ಫೀಚರ್ಸ್/ಸೇವೆಗಳ ಆಯ್ಕೆ ಪಡೆದಿದೆ. ಈ ಆಪ್‌ನಲ್ಲಿ ಸುಲಭವಾಗಿ IRCTC ಟಿಕೆಟ್ ಹಾಗೂ ತತ್ಕಾಲ್ ಟಿಕೆಟ್‌ಗಳ ಸರ್ಚ್ ಮಾಡಬಹುದು. ರನ್ನಿಂಗ್ ಟ್ರೈನಿನ ಲೈವ್ ಸ್ಟೇಟಸ್ ಚೆಕ್ ಮಾಡಬಹುದಾಗಿದೆ. ಅಲ್ಲದೇ ರೈಲು ವೇಳಾಪಟ್ಟಿಯನ್ನು ತೋರಿಸುವ ಆಯ್ಕೆಯನ್ನು ಇದು ಒಳಗೊಂಡಿದೆ.
ಮೇಕ್ ಮೈ ಟ್ರಿಪ್
ಒಂದೇ ಆಪ್‌ನಲ್ಲಿ ರೈಲು, ಹೋಟೆಲ್, ಫ್ಲೈಟ್, ಬಸ್, ಕ್ಯಾಬ್ ಮತ್ತು ಇನ್ನೂ ಹೆಚ್ಚಿನ ಸೇವೆಗಳನ್ನು ಕಾಯ್ದಿರಿಸುವುದಕ್ಕೆ ಮೇಕ್ ಮೈ ಟ್ರಿಪ್ ಆಪ್ (MakeMyTrip) ಒಂದು ಉತ್ತಮ ಪ್ಲಾಟ್‌ಫಾರ್ಮ್ ಎನ್ನಬಹುದು. ಈ ಅಪ್ಲಿಕೇಶನ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಆಯ್ಕೆ ಜೊತೆಗೆ ಟ್ರೈನ್ ವೇಳಾಪಟ್ಟಿಗಳನ್ನು ಸಹ ಚೆಕ್ ಮಾಡಬಹುದು. ಅಲ್ಲದೇ ಟ್ರೈನ್ ಲೈವ್ ರನ್ನಿಂಗ್ ಸ್ಟೇಟಸ್ ಅನ್ನು ತಿಳಿಯಬಹುದಾಗಿದೆ. ಇದರೊಂದಿಗೆ PNR ಸ್ಟೇಟಸ್ ಸಹ ಚೆಕ್ ಮಾಡಬಹುದಾಗಿದೆ.
ರೈಲು ಯಾತ್ರಾ ಆಪ್
ರೈಲು ಯಾತ್ರಾ (RailYatra) ಆಪ್ ರೈಲು ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆಯ ಮತ್ತೊಂದು ಉತ್ತಮ ಆಪ್ ಎನಿಸಿದೆ. ಈ ರೈಲು ಯಾತ್ರಾ ಆಪ್ ಅಪ್ಲಿಕೇಶನ್ ಐಫೋನ್, ಆಂಡ್ರಾಯ್ಡ್ ಮತ್ತು ವಿಂಡೋಸ್‌ನಲ್ಲಿ ಲಭ್ಯವಿದೆ. ಪ್ರಯಾಣಿಕರು ಸೀಟ್ ಲಭ್ಯತೆ, ಟಿಕೆಟ್ ಶುಲ್ಕ ಮತ್ತು ಟ್ರೈನ್ ಲೈವ್ ಸ್ಟೇಟಸ್ ಜೊತೆಗೆ ಟ್ರೈನ್ ಆಗಮನ / ನಿರ್ಗಮನವನ್ನು ಚೆಕ್ ಮಾಡಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಅಂದಹಾಗೆ ಆಪ್‌ನಲ್ಲಿ ಸ್ಟೇಷನ್ ಹತ್ತಿರದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆಯಲು, ಮೆಡಿಕಲ್ ಎಮರ್ಜೆನ್ಸಿ ಎಂಬ ಆಯ್ಕೆ ಇದೆ.