ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ನಿವಾಸದ ಅಡಿಯಲ್ಲಿ 'ಶಿವಲಿಂಗ' ಇದೆ. ಇಲ್ಲಿ ಉತ್ಖನನ ನಡೆಯಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಅವರು ಹೀಗೆ ಹೇಳಿದರು.
ಈ ಮೂಲಕ, ಪುರಾತನ ಕಾಲದಲ್ಲಿ ದೇಗುಲ ಇತ್ತು ಎಂಬ ಶಂಕೆ ಮೇಲೆ ಸಂಭಲ್ ಮಸೀದಿ ಸೇರಿ ರಾಜ್ಯದ ಹಲವು ಸ್ಥಳಗಳಲ್ಲಿ ಉತ್ಖನನ ನಡೆಸುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರವನ್ನು ಟೀಕಿಸಿದರು.
ಇವಿಎಂ ನಂಬಿಕೆಗೆ ಅರ್ಹವಲ್ಲ: ಮತಪತ್ರ ಬಳಸಿ ಚುನಾವಣೆಗಳನ್ನು ನಡೆಸಬೇಕು ಎಂದು ಅಖಿಲೇಶ್ ಯಾದವ್ ಆಗ್ರಹಿಸಿದರು.
'ಜರ್ಮನಿಯಂಥ ದೇಶ ಸಹ ಮತಪತ್ರ ಬಳಸುತ್ತಿದೆ. ಆದರೆ ಭಾರತದಲ್ಲಿ ಸ್ವಹಿತಾಸಕ್ತಿಗಾಗಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ' ಎಂದು ಹೇಳಿದರು.
ಇವಿಎಂಗಳ ಮೇಲೆ ಯಾರಿಗೂ ನಂಬಿಕೆ ಇಲ್ಲ. ಚುನಾವಣೆಗಳಲ್ಲಿ ಜಯ ಸಾಧಿಸಿರುವವರಿಗೂ ಇವಿಎಂ ಮೇಲೆ ಅಪನಂಬಿಕೆ ಇದ್ದಂತಿದೆ ಎಂದರು.