ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಉದಿನೂರ್ ನಿವಾಸಿ, ಪ್ಲಸ್‍ಟು ವಿದ್ಯಾರ್ಥಿನಿ ಮೃತದೇಹ ಮನೆಯೊಳಗೆ ಕಿಟಿಕಿ ಸರಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ಇಡಯಿಲಕ್ಕಾಡ್ ನಿವಾಸಿ ದಿ. ಸುಮಿತ್ರನ್-ಸೀಮಾ ದಂಪತಿ ಪುತ್ರಿ, ಉದಿನೂರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿ ಕೆ. ಮೀರಾ(17)ನೇಣಿಗೆ ಶರಣಾದ ಬಾಲಕಿ.
ಅಸೌಖ್ಯ ಬಾಧಿಸಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿರಬೇಕೆಂದು ಸಂಶಯಿಸಲಾಗಿದೆ. ಕಳೆದ ರಾಜ್ಯ ಶಾಲಾ ಕಲೋತ್ಸವದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಮೀರಾ ಶಿಕ್ಷಣದಲ್ಲೂ ಮುಂಚೂಣಿಯಲ್ಲಿದ್ದರೆನ್ನಲಾಗಿದೆ. ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.