ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಸನಿಹದ ಪೂಚಕ್ಕಾಡ್ ನಿವಾಸಿ, ಅನಿವಾಸಿ ಭಾರತೀಯ ಎಂ.ಸಿ ಅಬ್ದುಲ್ ಗಫೂರ್ ಹಾಜಿ (55)ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಮುರು ಮಂದಿ ನೇರವಾಗಿ ಶಾಮೀಲಾಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮಧೂರು ಕೊಲ್ಯ ನಿವಾಸಿ ಆಯಿಷಾ ಕೊಲೆ ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿಲ್ಲ ಎಂಬ ಅಂಶವನ್ನೂ ಪತ್ತೆಹಚ್ಚಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಕುಳಿಕುನ್ನುವಿನ ಮಹಿಳಾ ಮಂತ್ರವಾದಿ ಶಮೀಮಾ ಯಾನೆ ಜಿನ್ನುಮ್ಮ (38), ಪತಿ ಉಬೈದ್ (40), ಪೂಚಕ್ಕಾಡ್ ನಿವಾಸಿ ಅನ್ಸಿಫಾ (34) ಮತ್ತು ಮಧೂರಿನ ಆಯಿಷಾ (40) ಎಂಬವರನ್ನು ಬಂಧಿಸಲಾಗಿದೆ. ಈ ಮಧ್ಯೆ ಆರೋಪಿಗಳು ದೋಚಿರುವ ಒಟ್ಟು 596ಪವನು(4.76ಕಿ.ಗ್ರಾಂ) ಚಿನ್ನದಲ್ಲಿ 29ಪವನು ಕಾಸರಗೋಡಿನ ಜ್ಯುವೆಲ್ಲರಿಯಿಂದ ವಶಪಡಿಸಿಕೊಳ್ಳಲಾಗಿದ್ದು, ಉಳಿದ ಚಿನ್ನ ವಶಪಡಿಸುವ ಪ್ರಕ್ರಿಯೆ ಮುಂದುವರಿದಿದೆ.