ಕಾಸರಗೋಡು: ಚೆಮ್ನಾಡು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ 18ನೇ ವಾರ್ಷಿಕೋತ್ಸವದ ಅಂಗವಾಗಿ ಡಿ.11ರಂದು ವೇದಿಕೆಯಲ್ಲಿ ನಡೆಯಲಿದೆ. ದೇಶದ 80 ಕಲಾವಿದರನ್ನು ಒಟ್ಟುಗೂಡಿಸಿ ಸಿದ್ಧಪಡಿಸಲಾಗಿರುವ 'ಅಣಿಯಾಳಂ 'ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಕೊರಿಯೋಗ್ರಾಫಿಕ್ ಡ್ರಾಮಾ ಇದಾಗಿದ್ದು, ಜಾತೀಯತೆಯ ವಿಷಯವಾಗಿ ಮೂಡಿಬಂದಿರುವ ಈ ನಾಟಕಕ್ಕೆ ನೂರೈವತ್ತು ವಚರ್ಷದ ಹಿಂದಿನ ಚರಿತ್ರೆಯಿದೆ. ಇಂದಿಗೂ ಬೇರೂರಿರುವ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವುದು ನಾಟಕದ ಉದ್ದೇಶವಾಗಿದೆ ಎಂಬುದಾಗಿ ನೃತ್ಯ ಸಂಯೋಜಕ ನಾಟಕದ ನಿರ್ದೇಶಕ ಸೂರಜ್ ಮಾವಿಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೂರು ತಿಂಗಳ ತರಬೇತಿಯೊಂದಿಗೆ ಡಿ. 11ರಂದು ನಾಟಕ ಸೆಟ್ಟೇರಲಿರುವುದಾಗಿ ತಿಳಿಸಿದರು.
ಚೆಮ್ನಾಡು ಶ್ರೀಧರ್ಮಶಾಸ್ತಾ ಭಜನಾ ಮಂದಿರ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಗಂಗಾಧರನ್ ಕಾಟಂಬಳ್ಳಿ, ಕಾರ್ಯಕ್ರಮ ಸಮಿತಿ ಉಪಾಧ್ಯಕ್ಷ ದಿವಾಕರನ್ ಕೋಣತ್ತುಮೂಲ ರವಿ
ನಂಜಿಲ್, ಗಿರೀಶ್ ಪಾಲೋತ್ ಜಯರಾಜ್ ಮಡಿಕಲ್ ಉಪಸ್ಥಿತರಿದ್ದರು.