ಢಾಕಾ: ಬಾಂಗ್ಲಾದೇಶದ ಸಚಿವಾಲಯದ ಪ್ರಮುಖ ಕಟ್ಟಡದಲ್ಲಿ ಗುರುವಾರ ಬೆಂಕಿ ಅವಘಡ ಸಂಭವಿಸಿದ್ದು, ಸರ್ಕಾರದ ಕೆಲವು ದಾಖಲೆಗಳು ಸುಟ್ಟುಹೋಗಿವೆ.
ದುಷ್ಕರ್ಮಿಗಳ ವಿಧ್ವಂಸಕ ಕೃತ್ಯ ಇದಾಗಿರಬಹುದೇ ಎಂಬ ಶಂಕೆ ಇದ್ದು, ಅದರ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ಬಾಂಗ್ಲಾ ಸಚಿವಾಲಯದ 'ಬಿಲ್ಡಿಂಗ್ 7'ರಲ್ಲಿ ಬೆಂಕಿ ವ್ಯಾಪಿಸಿತು. ಅದನ್ನು ನಂದಿಸಲು ಅಗ್ನಿಶಾಮಕ ದಳದವರಿಗೆ ಆರು ತಾಸು ಬೇಕಾಯಿತು. ಗುರುವಾರ ನಸುಕಿನಲ್ಲಿ ಅವಘಡ ಆಗಿದ್ದು, ಯಾರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.