ಮುಳ್ಳೇರಿಯ: ಕಾರಡ್ಕ ಸನಿಹದ ಕೊಟ್ಟಂಗುಳಿಯಲ್ಲಿ ಮತ್ತೆ ಚಿರತೆ ದಾಳಿಯಿಂದ ಜನತೆ ಕಂಗಾಲಾಗಿದ್ದಾರೆ. ಇಲ್ಲಿನ ನಿವಾಸಿ ರಾಮಕೃಷ್ಣನ್ ಎಂಬವರ ಮನೆಯ ಸಾಕು ನಾಯಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ನಾಯಿ ಗಂಭೀರ ಗಾಐಗೊಂಡಿದೆ.
ಮನೆಯ ನಾಯಿ ಜೋರಾಗಿ ಬೊಗಳುತ್ತಿದ್ದ ಹಿನ್ನೆಲೆಯಲ್ಲಿ ಮನೆಯವರು ಎಚ್ಚರಗೊಂಡು ಬೆಳಕು ಹಾಯಿಸುತ್ತಿದ್ದಂತೆ ಚಿರತೆ ನಾಯಿಯ ಮೇಲೆರಗಿ ಕತ್ತಿನ ಭಾಗಕ್ಕೆ ಗಂಭೀರ ಗಾಯ ಮಾಡಿದೆ. ಈ ಬಗ್ಗೆ ರಾಮಕೃಷ್ಣನ್ ನೀಡಿದ ಮಾಹಿತಿಯನ್ವಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆಗಾಗಿ ಹುಡುಕಾಟ ನಡೆಸಿದರೂ ಕಂಡುಬಂದಿರಲಿಲ್ಲ. ತಿಂಗಳ ಹಿಂದೆಯಷ್ಟೆ ಕೊಟ್ಟಂಗುಳಿ ಆಸುಪಾಸಿನ ವಿನೋದ್ ಹಾಗೂ ಗೋಪಾಲನ್ ಎಂಬವರ ಮನೆ ಅಂಗಳದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆಯನ್ನು ಬೋನು ಇರಿಸಿ ಸೆರೆಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಪ್ರಯತ್ನವೂ ವಿಫಲವಾಗಿತ್ತು.