ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಗಣಕೀಕೃತ ಸೇವಾ ಸೌಲಭ್ಯದ ಉದ್ಘಾಟನೆ ಗುರುವಾರ ಸಂಜೆ ಜರಗಿತು. ಮಲಬಾರ್ ದೇವಸ್ವಂ ಬೋರ್ಡಿನ ಸಹಾಯಕ ಕಮೀಶನರ್ ಕೆ.ಪಿ.ಪ್ರದೀಪ್ ಕುಮಾರ್ ಸೇವಾ ಸೌಲಭ್ಯದ ಕೊಠಡಿಯ ಫಲಕ ಅನಾವರಣಗೊಳಿಸಿದರು. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಡಿಜಿಲೈಸ್ಡ್ ಸೇವೆಯ ಕಂಪ್ಯೂಟರ್ ಸ್ವಿಚ್ ಆನ್ ಗೈದು ಪ್ರಥಮ ರಶೀದಿ ಸ್ವೀಕೃತಿ ನಡೆಸಿದರು.
ಡಿಜಿಟಲ್ ಸೇವಾ ಸೌಲಭ್ಯಕ್ಕೆ ಅಗತ್ಯವಾದ ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು ಕೊಡುಗೆ ರೂಪದಲ್ಲಿ ನೀಡಿದ ಅನಿವಾಸಿ ಉದ್ಯಮಿ ಶಿವಶಂಕರ್ ನೆಕ್ರಾಜೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ತಾರನಾಥ ರೈ ಪಡ್ಡಂಬೈಲುಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೊಕ್ತೇಸರ ಗಿರೀಶ್ ಕುಮಾರ್ ಕಾಟುಕುಕ್ಕೆ, ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರಗುಡ್ಡೆ, ರಿತೇಶ್ ಕಿರಣ್ ಕಾಟುಕುಕ್ಕೆ, ದೇವಸ್ವಂ ಬೋರ್ಡಿನ ಹೆಡ್ ಕ್ಲಾರ್ಕ್ ರಘು, ಕವಯಿತ್ರಿ ರಾಜಶ್ರೀ ಟಿ.ರೈ ಪೆರ್ಲ, ಕಾಸರಗೋಡು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ, ಉತ್ಸವ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೋಡುಮಾಡು, ಕಾರ್ಯದರ್ಶಿ ಶಶಿಧರ ಮಾಸ್ತರ್, ಗೋಪಾಲ ಮಣಿಯಾಣಿ ಕೋಲಯಾಗುತ್ತು ಮೊದಲಾದವರು ಭಾಗವಹಿಸಿದ್ದರು. ಜನವರಿ ತಿಂಗಳಿನಿಂದ ಕ್ಷೇತ್ರದ ಸೇವೆಗಳು ಗಣಕೀಕೃತವಾಗಿ ಲಭ್ಯವಾಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.