ಬಿಜಾಪುರ : ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಎರಡು ಪ‍್ರತ್ಯೇಕ ಘಟನೆಗಳಲ್ಲಿ ಗ್ರಾಮ ಪಂಚಾಯಿತಿಯ ಇಬ್ಬರು ಮಾಜಿ ಅಧ್ಯಕ್ಷರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಇದೇ ರೀತಿ ಸುಕ್ಳು ಪಾರ್ಸ ಅವರನ್ನು ಬಿರಿಯಭೂಮಿ ಗ್ರಾಮದಿಂದ ಸೋಮವಾರ ಅಪಹರಿಸಿದ್ದ ನಕ್ಸಲರು ಬುಧವಾರ ಹತ್ಯೆ ಮಾಡಿ, ಶವವನ್ನು ಗ್ರಾಮದ ಬಳಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಪೊಲೀಸರಿಗೆ ಸಹಕರಿಸುತ್ತಿದ್ದ ಕಾರಣಕ್ಕೆ ಅವ್ಲಾಮ್‌ನನ್ನು ಹತ್ಯೆ ಮಾಡಿದ್ದೇವೆ' ಎಂದು ಗಂಗಲೂರು ಪ್ರದೇಶ ನಕ್ಸಲ್ ಸಂಘಟನೆಯು ಭಿತ್ತಿಪತ್ರದ ಮೂಲಕ ತಿಳಿಸಿದೆ.
ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದ ಕಾರಣಕ್ಕೆ ಸುಕ್ಳು ಪಾರ್ಸ ಅವರನ್ನು ಹತ್ಯೆ ಮಾಡಿರುವುದಾಗಿ ಭೈರಂಗಢ ಪ್ರದೇಶ ನಕ್ಸಲ್ ಸಂಘಟನೆ ಹೇಳಿಕೊಂಡಿದೆ. ಪಾರ್ಸ ಶವದ ಬಳಿ ಭಿತ್ತಿ ಪತ್ರ ದೊರೆತಿದೆ ಎಂದು ಪೊಲೀಸರು ಹೇಳಿದರು.
'ಗ್ರಾಮದ ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ಬಿಡದಿದ್ದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ನಕ್ಸಲರು ಬೆದರಿಕೆ ಹಾಕಿದ್ದಾರೆ. ಎರಡು ಪ್ರದೇಶಗಳಲ್ಲಿ ನಕ್ಸಲರ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ' ಎಂದು ತಿಳಿಸಿದರು.
'ಈ ಹತ್ಯೆ ಸೇರಿದಂತೆ, 7 ಜಿಲ್ಲೆಗಳನ್ನು ಒಳಗೊಂಡಿರುವ ರಾಜ್ಯದ ಬಸ್ತಾರ್ ಪ್ರದೇಶದಲ್ಲಿ ಈ ವರ್ಷ ನಕ್ಸಲರು ಒಟ್ಟು 55 ಮಂದಿಯನ್ನು ಹತ್ಯೆ ಮಾಡಿದ್ದಾರೆ. 2022ರ ಜನವರಿಯಿಂದ 2023ರ ಏಪ್ರಿಲ್‌ವರೆಗೆ ಬೇರೆ ಬೇರೆ ಘಟನೆಗಳಲ್ಲಿ ಬಿಜೆಪಿಯ 9 ನಾಯಕರನ್ನು ಕೊಲ್ಲಲಾಗಿದೆ' ಎಂದು ಪೊಲೀಸರು ಮಾಹಿತಿ ನೀಡಿದರು.