ಚೆನ್ನೈ: ಅಮೆರಿಕದ ರಾಯಭಾರ ಕಚೇರಿಯು ದೆಹಲಿಯ ಅಮೆರಿಕನ್ ಸೆಂಟರ್‌ನಲ್ಲಿ ಉದ್ಯಮಿಗಳ ಮಾರ್ಗದರ್ಶನಕ್ಕಾಗಿ ಪ್ರತಿಷ್ಠಿತ 'ನೆಕ್ಸಸ್' ಕಾರ್ಯಕ್ರಮವನ್ನು ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಈ ತರಬೇತಿಯು ಮುಂದಿನ ವರ್ಷ ಫೆಬ್ರುವರಿ 2ರಿಂದ ಆರಂಭವಾಗಿ ಒಂಬತ್ತು ವಾರ ನಡೆಯಲಿದೆ.
'ನೆಕ್ಸಸ್' ಸರಣಿಯ 20ನೇ ಕಾರ್ಯಕ್ರಮ ಇದಾಗಿದೆ.
ಕಾರ್ಯಕ್ರಮದಲ್ಲಿ ಭಾರತದ 15 ನವೋದ್ಯಮಗಳಿಗೆ ಭಾರತೀಯ ಮತ್ತು ಅಮೆರಿಕದ ತಜ್ಞರಿಂದ ತರಬೇತಿ ಪಡೆಯುವ ಅವಕಾಶ ದೊರೆಯಲಿದೆ. ನವೋದ್ಯಮಗಳ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಉದ್ಯಮಿಗಳ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಇಲ್ಲಿ ಚರ್ಚಿಸಲಾಗುತ್ತದೆ. ಈಗಿನ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಲು, ಮಾರುಕಟ್ಟೆಯ ನಾಡಿಮಿಡಿತ ಅರಿಯಲು ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು ಜನವರಿ 5, 2025ರ ಒಳಗಾಗಿ www.startupnexus.in ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಜನವರಿ 17, 2025ರ ಒಳಗಾಗಿ ಮಾಹಿತಿ ನೀಡಲಾಗುತ್ತದೆ.