HEALTH TIPS

ವಿಶೇಷ ಚೇತನರಿಗೆ ಸ್ಪೂರ್ತಿ-ಪುನೀತ್‍ಕೃಷ್ಣ ಪಾಣೂರು= ಕೇರಳ ಸರಕಾರಿ ಸೇವೆಗೆ ಸೇರಿದ ಕಾಸರಗೋಡಿನ ಅತೀ ಕಿರಿಯ ಕನ್ನಡಿಗ

ಕಾಸರಗೋಡು: ಕೇರಳ ಲೋಕಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪ್ರಸಕ್ತ ತಿರುವನಂತಪುರದ ಟ್ರಷರಿ ಡೈರೆಕ್ಟರೇಟ್‍ನಲ್ಲಿ ಸರ್ಕಾರಿ ಸೇವೆಗೆ ಪಾದಾರ್ಪಣೆಗೈಯುವ ಮೂಲಕ ಪುನೀತ್‍ಕೃಷ್ಣ ಪಾಣೂರು ವಿಶೇಷಚೇತನರಿಗೆ ಸ್ಪೂರ್ತಿಯಾಗಿದ್ದಾರೆ. 

ಅತೀ ಕಿರಿಯ ಹರೆಯದಲ್ಲಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ಮೂಲಕ, ಪ್ರಯತ್ನವಿದ್ದರೆ,  ಎಲ್ಲರಿಗೂ ಈ ಸಾಧನೆ ಮಾಡಬಹುದೆಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.  ತಿರುವನಂತಪುರದಲ್ಲಿರುವ ಕೇರಳ ಸರ್ಕಾರದ ಟ್ರಷರಿ ನಿರ್ದೇಶನಾಲಯದಲ್ಲಿ ಎಲ್‍ಡಿ ಟೈಫಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 


ಜನಿಸುವಾಗಲೇ ಆಂಶಿಕವಾಗಿ ಶ್ರವಣ ಶಕ್ತಿ ಕಳೆದುಕೊಂಡಿದ್ದ ಬಾಲಕ, ತನ್ನ ತಾಯಿಯ ನಿರಂತರ ಪರಿಶ್ರಮದ ಫಲವಾಗಿ ಮೂರು ವರ್ಷಗಳ ಕಾಲ ಮಂಗಳೂರಿನ ಆಸ್ಪತ್ರೆಗಳಲ್ಲಿ ಸ್ಪೀಚ್ ತೆರಾಫಿ ಚಿಕಿತ್ಸೆ ಪಡೆದುಕೊಂಡಿದ್ದರು. ಕಾಸರಗೋಡಿನ ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲ್‍ನಲ್ಲಿ ಎಸ್ಸೆಸೆಲ್ಸಿಯಲ್ಲಿ ಪ್ರಥಮ ಶ್ರೇಣಿಯಲ್ಲೂ, ಹೈಯರ್‍ಸೆಕೆಂಡರಿಯನ್ನು ನಗರದ ಬಿಇಎಂ ಹೈಯರ್‍ಸೆಕೆಂಡರಿ ಶಾಲೆಯಲ್ಲೂ, ಬಿಎಸ್‍ಸಿ ಕಂಪ್ಯೂಟರ್ ಸೈಯನ್ಸ್‍ನ್ನು ಕುಂಬಳೆ ಐಎಚ್‍ಆರ್‍ಡಿಯಲ್ಲಿ ಪೂರ್ತಿಗೊಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಕಲಿಯುತ್ತಿರುವಾಗಲೇ ಕಂಪ್ಯೂಟರ್ ತರಬೇತಿಯನ್ನು ಪೂರ್ತಿಗೊಳಿಸಿದ್ದ ಇವರು, ಕೋವಿಡ್ ಕಾಲಾವಧಿಯಲ್ಲಿ ಟೈಪಿಂಗ್ ಕೋರ್ಸ್  ಪೂರ್ತಿಗೊಳಿಸಿ ಇಂಗ್ಲೀಷ್ ಲೊವರ್ ಮತ್ತು  ಜೂನಿಯರ್ ಕನ್ನಡ, ಹೈಯರ್‍ನಲ್ಲಿ ಉತ್ತೀರ್ಣರಾಗಿದ್ದಾರೆ. ಎಲ್‍ಬಿಎಸ್ ಡಾಟಾ ಎಂಟ್ರಿ ಆಪರೇಟರ್ ಕೋರ್ಸ್ ಸಹ ಪೂರ್ತಿಗೊಳಿಸುವುದರ ಜತೆಗೆ 2023ರಲ್ಲಿ ಲೈಬ್ರರಿಯನ್ ಸರ್ಟಿಫಿಕೆಟ್ ಕೋರ್ಸ್ ಸಹ ಪ್ರಥಮ ದರ್ಜೆಯಲ್ಲಿ ಪೂರ್ತಿಗೊಳಿಸಿದರು.

ಪುನೀತ್ ಅವರ ಸತತ ಪರಿಶ್ರಮ, ಸಾಧನೆ, ತಂದೆ, ತಾಯಿಯ ನಿರಂತರ ಪೆÇ್ರೀತ್ಸಾಹದಿಂದ ಪ್ರಸಕ್ತ ಎಳವೆಯಲ್ಲೇ ಕೇರಳ ಸರ್ಕಾರಿ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದಾರೆ.  

ಪುನೀತ್ ಅವರು ಕಾಸರಗೋಡಿನ ಶಿಕ್ಷಣ-ಉದ್ಯೋಗ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಕೇರಳ ಲೋಕಸೇವಾ ಆಯೋಗದಲ್ಲಿ ಸುಮಾರು 25ವರ್ಷಗಳ ಅನುಭವಹೊಂದಿ ಅಂಡರ್‍ಸೆಕ್ರೆಟರಿ ಆಗಿ ನಿವೃತ್ತರಾದ, ಕಾಸರಗೋಡು ಶಿಕ್ಷಣ-ಉದ್ಯೋಗ ಮಾಹಿತಿ ಕೇಂದ್ರ ನಿರ್ದೇಶ ಗಣೇಶ ಪ್ರಸಾದ ಪಾಣೂರು ಅವರ ಪುತ್ರ.  ಗಣೇಶ ಪ್ರಸಾದ ಪಾಣೂರು ಅವರು ಸಮಗ್ರ ಕೇರಳ ಪಿಎಸ್‍ಸಿ ಗೈಡು, ಮಕ್ಕಳಿಗಾಗಿ ಜನರಲ್ ನಾಲೇಜ್, ಎಲ್‍ಡಿ ಕ್ಲರ್ಕ್ ಕನ್ನಡ-ಮಲೆಯಾಳ ಮುಂತಾದ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಕನ್ನಡ ಉದ್ಯೋಗಾರ್ಥಿಗಳಿಗೆ ನೆರವಾಗಿದ್ದಾರೆ. ಅಲ್ಲದೇ ಗ್ರಂಥಾಲಯ ಚಳುವಳಿ, ವಿಶೇಷಚೇತನರಿಗೆ ಮಾಹಿತಿ, ಕೊರಗ ಜನಾಂಗ ಅಭಿವ್ಯಕ್ತಿ ಸಮಾಜ ಸೇವೆ ಮುಂತಾದ ಕ್ಷೇತ್ರದಲ್ಲಿ ತೊಡಗಿಸಿದ್ದಾರೆ.

ತಂದೆ ಜತೆಗಿನ ಒಡನಾಟ ಪ್ರೇರಣೆ:

ತಂದೆಯ ಜತೆಗಿನ ನಿರಂತರ ಒಡಾಟ, ವಿವಿಧ ಕೆಲಸಗಳಿಗಾಗಿ ಅವರೊಂದಿಗೆ ತೆರಳಿ ಆನೇಕ ಸ್ಥಳಗಳ ಪರಿಚಯ, ಆನುಭವಸ್ಥರ ಒಡನಾಟವು, ತಿಳುವಳಿಕೆ ತನ್ನ ಇಂದಿನ ಸಾಧನೆಗೆ ನೆರವಾಗಿದೆ ಎಂಬುದಾಗಿ ಪುನೀತ್‍ಕೃಷ್ಣ ತಿಳಿಸುತ್ತಾರೆ. ಪ್ರಸಕ್ತ ತಿರುವನಂತಪುರದಲ್ಲಿ ನೆಲೆಸಿದ್ದು,  ಸದ್ಯದಲ್ಲಿಯೇ ಕಾಸರಗೋಡಿಗೆ ವರ್ಗಾವಣೆಗೊಳ್ಳುವ ಆಶಾಭಾವನೆಯನ್ನು ಹೊಂದಿದ್ದಾರೆ.  ವಿಶೇಷಚೇತನರನ್ನು ಹೆಡ್‍ಕ್ವಾರ್ಟರ್ಸ್ ಹುದ್ದೆಗೆ ಶಿಫಾರಸು ಮಾಡಬಾರದೆಂಬ ಸರ್ಕಾರದ ಸುತ್ತೋಲೆ ಇದ್ದು,  ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿ ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು. ಮುಂದಿನ ದಿನದಲ್ಲಿ ಡಿಪಾರ್ಟ್‍ಮೆಂಟ್ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಬಡ್ತಿ ಪಡೆಯುವ ಇಂಗಿತವನ್ನು ಪುನೀತ್‍ಕೃಷ್ಣ ವ್ಯಕ್ತಪಡಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries