ಕಾಸರಗೋಡು: ಜಿಲ್ಲಾ ಮಣ್ಣು ಪರಿಶೋಧನೆ=ಮಣ್ಣು ಸಂರಕ್ಷಣಾ ಇಲಾಖೆ ವತಿಯಿಂದ ಈ ವರ್ಷದ ವಿಶ್ವ ಮಣ್ಣು ದಿನಾಚರಣೆಯನ್ನು ಡಿಸೆಂಬರ್ 5 ರಂದು ಬೆಳಿಗ್ಗೆ 10ಕ್ಕೆ ವಿಸ್ತೃತ ಕಾರ್ಯಕ್ರಮಗಳೊಂದಿಗೆ ಕಞಂಗಾಡು ಪಡನ್ನಕ್ಕಾಡ್ ಅನಂತಂಪಲ್ಲ ಶ್ರೀಮುತ್ತಪ್ಪನ್ ಮಡಪ್ಪುರಂ ಸಭಾಂಗಣದಲ್ಲಿ ನಡೆಯಲಿದೆ. ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸುವರು. ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪ್ರಧಾನ ಕೃಷಿ ಅಧಿಕಾರಿ ಪಿ.ರಾಘವೇಂದ್ರ ಮಣ್ಣು ದಿನಾಚರಣೆ ಸಂದೇಶ ನೀಡಲಿದ್ದಾರೆ. ನಂತರ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಲವರ್ಣ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್ ಬಹುಮಾನ ವಿತರಿಸುವರು.