ಮುಳ್ಳೇರಿಯ : ಕುಂಟಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಡಿ. 15 ಮತ್ತು 16ರಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರ ಸಪ್ತತಿ ಸಂಭ್ರಮ ನಡೆಯಲಿದೆ. ಡಿ. 15 ರಂದು ಬೆಳಗ್ಗೆ 7 ಕ್ಕೆ 108 ತೆಂಗಿನಕಾಯಿ ಗಣಪತಿ ಹೋಮ, 10 ಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, 10.30 ಕ್ಕೆ 108 ತೆಂಗಿನಕಾಯಿ ಗಣಪತಿ ಹೋಮದ ಪೂರ್ಣಾಹುತಿ, 12.30ಕ್ಕೆ ಶ್ರೀ ದೇವರ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಈ ಸಂದರ್ಭ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಆಶೀರ್ವಚನ ನೀಡುವರು. ಡಾ ಯು ಬಿ ಕುಣಿಕುಳ್ಳಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿ ಮುಖ್ಯ ಅತಿಥಿಗಳಾಗಿ ಮಾತನಾಡಲಿರುವರು. ಸಂಜೆ 4 ಕ್ಕೆ ಸಿದ್ಧಾರ್ಥ್ ಬೆಳ್ಮಣ್ ಮತ್ತು ಬಳಗದವರಿಂದ ಭಜನ್ ಸಂಧ್ಯಾ ನಡೆಯಲಿದೆ. ಡಿ. 16 ಸೋಮವಾರದಂದು ಬೆಳಗ್ಗೆ 5 ಕ್ಕೆ ಭೀಮರಥ ಶಾಂತಿ, 10 ಕ್ಕೆ ಭಜನೆ , 11 ಕ್ಕೆ ದ್ವಾದಶ ಮೂರ್ತಿ ಆರಾಧನೆ, ದಂಪತಿ ಪೂಜೆ, ಸುಹಾಸಿನಿ ಆರಾಧನೆ, ಮಂತ್ರಾಕ್ಷತೆ ನಡೆಯಲಿದೆ. ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.