HEALTH TIPS

ಅಲ್ಪಸಂಖ್ಯಾತ, ಬಹುಸಂಖ್ಯಾತ ಗಂಡಭೇರುಂಡದಂತೆ: ಸಂಸ್ಕೃತಿ ಚಿಂತಕ ಕೆ.ಎಂ. ಅಬೂಬಕ್ಕರ್

ಮಂಡ್ಯ: 'ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬುದು ಗಂಡಭೇರುಂಡದಂತೆ. ಒಂದು ಬಾಯಲ್ಲಿ ಹಾಲು, ಇನ್ನೊಂದು ಬಾಯಲ್ಲಿ ವಿಷ ಕೊಟ್ಟರೆ ವಿಷವಷ್ಟೇ ಒಳಗೆ ಹೋಗಿ ಸಾವುಂಟಾಗುತ್ತದೆ. ಸಮಾಜದಲ್ಲೂ ವಿಷ ಹೆಚ್ಚಾಗಿದೆ' ಎಂದು ಸಂಸ್ಕೃತಿ ಚಿಂತಕ ಕೆ.ಎಂ. ಅಬೂಬಕ್ಕರ್ ಸಿದ್ದಿಕ್, ಸಮಕಾಲೀನ ಸಂದರ್ಭದಲ್ಲಿ ಕೋಮುಸೌಹಾರ್ದಕ್ಕೆ ಎದುರಾದ ಆತಂಕಗಳತ್ತ ಗಮನ ಸೆಳೆದರು.

ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಯ ಒಡೆಯರ್ ವೇದಿಕೆಯಲ್ಲಿ ಭಾನುವಾರ, 'ಸಮಾನತೆ ಸಾರಿದ ದಾರ್ಶನಿಕರು' ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕುತ್ಸಿತ ಬುದ್ಧಿಯ ಜನರಿಂದ ಸಮಾಜದಲ್ಲಿ ಅಪನಂಬಿಕೆ, ಒಡಕು ಉಂಟಾಗಿದೆ' ಎಂಬ ಬೇಸರಿಸಿದರು.

'ದಾರ್ಶನಿಕರ ತತ್ವ ಸಿದ್ಧಾಂತಗಳು ಇಂದಿಗೂ ಜೀವಂತವಿದ್ದು, ಅವುಗಳನ್ನು ಬಳಸಿಕೊಂಡು ಸಮಾನತೆಯ ಆಶಯ ಬಿಂಬಿಸಬೇಕು. ಧರ್ಮಗಳ ಗುರಿ ಸಮಾನತೆ. ದಾರ್ಶನಿಕರು ಕೂಡ ಅದನ್ನೇ ಹೇಳಿದ್ದಾರೆ. ಕುಲ-ಗೋತ್ರ ಕೇವಲ ಗುರುತು ಪತ್ತೆಗಷ್ಟೇ ಎಂಬುದನ್ನ ಕುರಾನ್ ಹಾಗೂ ಭಗವದ್ಗೀತೆ ಧ್ವನಿಸಿದೆ. ಮೇಲ್ವರ್ಗದಲ್ಲಿ ಜನಿಸಿದರೂ ಎಲ್ಲರನ್ನು ಸಮಾನವಾಗಿ ಕಂಡ ಬಸವಣ್ಣನ ಬದುಕು ದೊ‌ಡ್ಡ ಆದರ್ಶ' ಎಂದರು.

'ದಾರ್ಶನಿಕರಲ್ಲಿ ಸಾಮ್ಯತೆ ಇದೆ. ಕಳಬೇಡ ಕೊಲಬೇಡವೆಂದ ಬಸವಣ್ಣನ ಸೂತ್ರಗಳನ್ನು ಹೋಲುವ ಸಿದ್ಧಾಂತ ಕುರಾನ್‌ನಲ್ಲೂ ಇದೆ. ಪೈಗಂಬರರ ವಚನಗಳಲ್ಲೂ ಇದೆ. ಕರ್ನಾಟಕದಲ್ಲಿ ನಡೆದ ಸಮಾನತೆಯ ಕ್ಷಿಪ್ರ ಕ್ರಾಂತಿಯಲ್ಲಿ ಸೂಫಿ ಸಂತರು ಪ್ರಮುಖ ಪಾತ್ರ ವಹಿಸಿದ್ದರು' ಎಂದರು.

'ಸಾಂಸ್ಕೃತಿಕ ನಾಯಕ ಬಸವಣ್ಣ' ಕುರಿತು ಮಾತನಾಡಿದ ಶಿವರುದ್ರ ಸ್ವಾಮೀಜಿ, 'ಮನುಷ್ಯ, ಕತ್ತೆ, ನಾಯಿ, ಹಕ್ಕಿ ಇತ್ಯಾದಿ ಎಂಬ ಭೇದವೇ ಜಾತಿ. ‌ಅದು ಬದಲಾಗುವುದಿಲ್ಲ. ಅದನ್ನು ತಿಳಿಯದೇ ಬದುಕುತ್ತಿರುವುದೇ ಅಸಮಾನತೆಗೆ ಕಾರಣ' ಎಂದರು.

'ಸಾಮರಸ್ಯ ಮೆರೆದ ದಾಸವರೇಣ್ಯರು' ಕುರಿತು ಮಾತನಾಡಿದ ಎನ್.‌ಆರ್ ಲಲಿತಾಂಬ, 'ದೇಶದಲ್ಲಿ ಈಚೆಗೆ ಸಾಮರಸ್ಯಕ್ಕೆ ಭಾರಿ ತೊಡಕುಂಟಾಗಿದೆ. ಅಧಿಕಾರ, ಸಂಪತ್ತಿನ ದಾಹದಿಂದ ಸೃಷ್ಟಿಯಾಗುತ್ತಿರುವ ಹಠಮಾರಿತನವು ರಾಜ್ಯದಲ್ಲಿ ಸಂಘರ್ಷಕ್ಕೆ ಪ್ರಮುಖ ಕಾರಣವಾಗುತ್ತಿದೆ' ಎಂದರು.

ಚಿಂತಕ ಶಂಕರ ದೇವನೂರು ಅಧ್ಯಕ್ಷತೆ ವಹಿಸಿದ್ದರು.

'ದೇವರಮನೆಯ ಮಕ್ಕಳೆಂದು ತಿಳಿಯಿರಿ'

ಕುತ್ಸಿತ ಮನಸ್ಥಿತಿಯ ವ್ಯಕ್ತಿಗಳು ಅಥವಾ ರಾಜಕಾರಣಿಗಳು ಸೃಷ್ಟಿಸುತ್ತಿರುವ ಅಪನಂಬಿಕೆಯಿಂದಾಗಿ ಸಮಾಜದಲ್ಲಿ ಸಾಮರಸ್ಯ ಕಡಿಮೆಯಾಗುತ್ತಿದೆ. ಎಲ್ಲರೂ ದೇವರ ಮನೆಯ ಮಕ್ಕಳು ಎಂದು ತಿಳಿದುಕೊಂಡು ಬದುಕಿದರೆ ಸಮಾನತೆ ಸಾಧ್ಯವಾಗಲಿದೆ ಎಂದು ಅಬೂಬಕ್ಕರ್ ಸಿದ್ದಿಕ್ ಹೇಳಿದರು. ದಾರ್ಶನಿಕರು ಸಾರಿದ ದರ್ಶನ ಬೇರೆ ಪ್ರದರ್ಶನ ಬೇರೆ. ಈಗ ಪ್ರದರ್ಶನವೇ ಹೆಚ್ಚಾಗಿದೆ ಎಂದರು ಶಿವರುದ್ರ ಸ್ವಾಮೀಜಿ ಹೇಳಿದರು. ದಾಸವರೇಣ್ಯರು ಹಾಡುಗಳ ಮೂಲಕ ಸಾಮರಸ್ಯಕ್ಕೆ ಯತ್ನಿಸಿದರು. ಅವರ ದೃಷ್ಟಿಯಲ್ಲಿ ಸಮರಸ ಭಾವವೇ ಸಾಮರಸ್ಯ.‌ ಅದು ಸಮರ ಭಾವ ಅಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಎನ್.‌ಆರ್ ಲಲಿತಾಂಬ ಆಶಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries