HEALTH TIPS

ಟಿಎಂಸಿ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಮಾತಿಗೆ ಲೋಕಸಭೆ ಕಲಾಪ ಬಲಿ

 ನವದೆಹಲಿ: ಟಿಎಂಸಿ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಉದ್ದೇಶಿಸಿ ಆಡಿದ ಮಾತು ಲೋಕಸಭೆಯಲ್ಲಿ ಗಲಾಟೆ ಸೃಷ್ಟಿಸಿತು. ಇದರಿಂದಾಗಿ ಬುಧವಾರ ಸದನದ ಕಲಾಪವನ್ನು ಮತ್ತೆ ಮತ್ತೆ ಮುಂದೂಡಲಾಯಿತು. ಬ್ಯಾನರ್ಜಿ ಅವರು ತಮ್ಮ ಮಾತಿಗೆ ಕ್ಷಮೆ ಯಾಚಿಸಿದರೂ, ವಿವಾದ ಮಾತ್ರ ತಣ್ಣಗಾಗಲಿಲ್ಲ.ಹೀಗಾಗಿ ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಯಿತು.

ವಿಪತ್ತು ನಿರ್ವಹಣಾ ಕಾಯ್ದೆಯ ತಿದ್ದುಪಡಿ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಬ್ಯಾನರ್ಜಿ ಅವರು ಆಡಿದ ಮಾತೊಂದು ಸಮಸ್ಯೆಗೆ ಮೂಲವಾಯಿತು. ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಕೇಂದ್ರ ಸರ್ಕಾರವು ಅಸಹಕಾರ ತೋರಿತ್ತು ಎಂದು ಬ್ಯಾನರ್ಜಿ ದೂರಿದರು.


ಆದರೆ, ಎಲ್ಲ ರಾಜ್ಯಗಳಿಗೂ ನೆರವು ನೀಡಿದ್ದು ಹಾಗೂ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿಭಾಯಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ತಿರುಗೇಟು ನೀಡಿದರು. ರಾಯ್ ಅವರಿಗೆ ಬೆಂಬಲವಾಗಿ ಬಂದ ಸಿಂಧಿಯಾ, ಸಾಂಕ್ರಾಮಿಕದ ಸಂದರ್ಭದಲ್ಲಿ ನೆರವಿನ ಅಗತ್ಯವಿದ್ದ ಎಲ್ಲ ದೇಶಗಳಿಗೆ ಭಾರತವು ಸಹಾಯ ಮಾಡಿ, ವಿಶ್ವಬಂಧು ಎಂದು ಕರೆಸಿಕೊಂಡಿತು ಎಂದರು.

ಆಗ ಬ್ಯಾನರ್ಜಿ ಅವರು ಸಿಂಧಿಯಾ ವಿರುದ್ಧ ವಾಗ್ದಾಳಿ ನಡೆಸಿದರು. ಸಿಂಧಿಯಾ ಕುರಿತಾಗಿ ಅವರು ಆಡಿದ ಕೆಲವು ಮಾತುಗಳನ್ನು ಸ್ಪೀಕರ್ ಓಂ ಬಿರ್ಲಾ ಕಲಾಪದ ಕಡತದಿಂದ ತೆಗೆಸಿದರು. ಆ ಸಂದರ್ಭದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಸಮರ ನಡೆದ ಕಾರಣ ಕಲಾಪವನ್ನು ಮುಂದೂಡಲಾಯಿತು.

ಸದನ ಮತ್ತೆ ಸೇರಿದಾಗ ಬ್ಯಾನರ್ಜಿ ಅವರು ತಮ್ಮ ಮಾತುಗಳಿಗೆ ಕ್ಷಮೆ ಯಾಚಿಸಿದರು. ಆದರೆ, ಅದನ್ನು ಒಪ್ಪಲು ಸಿಂಧಿಯಾ ನಿರಾಕರಿಸಿದರು.

'ನಾವೆಲ್ಲರೂ ಇಲ್ಲಿ ಆತ್ಮಗೌರವ ಇಟ್ಟುಕೊಂಡು ಬಂದಿರುತ್ತೇವೆ... ನಮ್ಮ ನೀತಿ, ದೃಷ್ಟಿಕೋನದ ಬಗ್ಗೆ ಟೀಕೆ ಮಾಡಿ. ಆದರೆ ವೈಯಕ್ತಿಕ ಮಟ್ಟದಲ್ಲಿ ಮಾತನಾಡಿದರೆ ಪ್ರತಿಕ್ರಿಯೆ ಪಡೆಯಲು ಸಿದ್ಧರಾಗಿರಿ' ಎಂದು ಸಿಂಧಿಯಾ ಹೇಳಿದರು.

ಕಾಂಗ್ರೆಸ್ ನಾಯಕರು ಮತ್ತು ಹೂಡಿಕೆದಾರ ಜಾರ್ಜ್ ಸೋರೊಸ್ ಅವರ ನಡುವೆ ನಂಟು ಇದೆ ಎಂಬ ಆರೋಪದ ವಿಚಾರವಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಶೂನ್ಯ ವೇಳೆಯಲ್ಲಿ ಮಾತಿನ ಚಕಮಕಿ ನಡೆಯಿತು. ಈ ಕಾರಣಕ್ಕಾಗಿಯೂ ಸದನದ ಕಲಾಪ ಮುಂದೂಡಬೇಕಾಯಿತು.

-ಕಲ್ಯಾಣ್ ಬ್ಯಾನರ್ಜಿ, ಟಿಎಂಸಿ ಸಂಸದಕಾಂಗ್ರೆಸ್ ಬಿಜೆಪಿ ಕಲಾಪ ಮುಂದೂಡುವಂತೆ ಮಾಡುತ್ತವೆ. ಹೀಗಾಗಿ ಬೇರೆ ಪಕ್ಷಗಳಿಗೆ ತಮ್ಮ ವಿಷಯ ಪ್ರಸ್ತಾಪಿಸಲು ಅವಕಾಶ ಸಿಗುವುದಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries