ಕಾಸರಗೋಡು: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಕಾಸರಗೋಡು ಚಾಪ್ಟರ್‍ನ 2025ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಹೋಟೆಲ್ ಸಿಟಿ ಟವರ್ ನಲ್ಲಿ ನಡೆದ ಸಮಾರಂಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಡಾ. ಐ ರಿಯಾಜ್ ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ಘಟಕದ ಅಧ್ಯಕ್ಷ ಡಾ. ಪಿ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.ಪೆÇ್ರ. ಡಾ. ಎ. ಸಂತೋಷ್ ಕುಮಾರ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಇಐ ಸದಸ್ಯ ಡಾ. ಜಾನಿ ಸೆಬಾಸ್ಟಿಯನ್, ಐಎಂಎ ಅಧ್ಯಕ್ಷ ಡಾ. ಹರಿಕಿರಣ್ ಬಂಗೇರ, ಹಿರಿಯ ಮೈಕ್ರೋಬಯಾಲಜಿಸ್ಟ್ ಡಾ. ರೇಖಾ ರೈ, ಚರ್ಮರೋಗ ತಜ್ಞ ಡಾ. ಸುಧಾ, ಐಎಂಎ ಮಾಜಿ ಕಾರ್ಯದರ್ಶಿ ಡಾ. ಜಿತೇಂದ್ರ ರೈ, ಡಾ. ಅಲಿ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಡಾ. ದಿವಾಕರ ರೈ ಅವರನ್ನು ಆಯ್ಕೆ ಮಾಡಲಾಯಿತು. ಡಾ. ಮಾಹಿನ್ ಪಿ. ಅಬ್ದುಲ್ಲ ಕಾರ್ಯದರ್ಶಿ ಹಾಗೂ ಡಾ. ಸುಕೇಶ್ ರಾಜ್ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭ ಮಕ್ಕಳ ಸ್ಕ್ರೀನ್ ಟೈಂ, ಬೆಳವಣಿಗೆ ಕುಂಠಿತದ ಬಗ್ಗೆ ಅವಲೋಕನ, ರೋಗನಿರೋಧಕ ಲಸಿಕೆ ವಿತರಣೆ, ಎದೆಹಾಲುಣಿಸುವಿಕೆ, ಪೂರಕ ಆಹಾರ ಮತ್ತು ಜ್ವರ ಮುಂತಾದ ವಿಷಯಗಳ ಕುರಿತು ತಜ್ಞರು ವಿಷಯ ಮಂಡಿಸಿದರು. ಹಾಲಿ ಕಾರ್ಯದರ್ಶಿ ಡಾ. ನೂತನ ಹಾಲಿ ಕಾರ್ಯದರ್ಶಿ ಡಾ.ಬಿ.ನಾರಾಯಣ ನಾಯ್ಕ ಅವರು ನೂತನ ಕಾರ್ಯದರ್ಶಿ ಮಾಹಿನ್ ಪಿ ಅಬ್ದುಲ್ಲಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.