ಮುಳ್ಳೇರಿಯ: ವಿಶ್ವ ಹಿಂದೂ ಪರಿಷತ್, ಮಾತೃ ಶಕ್ತಿ, ಭಜರಂಗ ದಳ ಹಾಗೂ ದುರ್ಗಾವಾಹಿನಿಯ ಕಾರ್ಯಕರ್ತರ ಸಮಾವೇಶ ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ಇತ್ತೀಚೆಗೆ ಜರಗಿತು. ಕಾಸರಗೋಡು ಗ್ರಾಮಾಂತರ ಪ್ರಖಂಡ ಅಧ್ಯಕ್ಷ ಡಾ.ಶಿವರಾಯ ಭಟ್ ಅಧ್ಯಕ್ಷತೆ ವಹಿಸಿದ ಸಭೆಯನ್ನು ಕಾಂಞಂಗಾಡ್ ಜಿಲ್ಲಾ ಮಾತೃ ಶಕ್ತಿ ಸಂಯೋಜಕಿ ಸತಿ ಕೋಡೋತ್ ದೀಪ ಬೆಳಗಿಸಿ ಉದ್ಘಾಟಿಸಿದರು.
ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಧರ್ಮಪ್ರಸಾರ ಪ್ರಮುಖ್ ವಾಮನ ಆಚಾರ್ಯ ಬೋವಿಕ್ಕಾನ, ಬಿ.ಎಂ.ಎಸ್. ಜಿಲ್ಲಾ ಸಮಿತಿ ಸದಸ್ಯ ಎಂ.ಕೆ.ರಾಘವನ್, ಭಜರಂಗ ದಳ ಕಾಸರಗೋಡು ಗ್ರಾಮಾಂತರ ಪ್ರಖಂಡ ಪ್ರಮುಖ್ ಭರತ್ ಕುಮಾರ್ ಅಡೂರು ಮುಂತಾದವರು ಸಭೆಯಲ್ಲಿ ಮಾತನಾಡಿದರು.
ಈ ಸಮಾವೇಶದಲ್ಲಿ ಕಾರಡ್ಕ ಖಂಡ ಸಮಿತಿಯ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ರಾಘವ ಪಿ.ಮುಳ್ಳೇರಿಯಾ (ಅಧ್ಯಕ್ಷ), ಪವನ್ ಕುಂಟಾರು, ಪುರುಷೋತ್ತಮನ್ (ಉಪಾಧ್ಯಕ್ಷರು), ಚಂದ್ರನ್ ಕಾರಡ್ಕ (ಪ್ರಧಾನ ಕಾರ್ಯದರ್ಶಿ), ಪ್ರಶಾಂತ್ ಕಲ್ಲಂಕೂಡ್ಲು, ಹರಿದಾಸ್ ಬೆಳ್ಳಿಗೆ (ಕಾರ್ಯದರ್ಶಿಗಳು) ಹಾಗೂ ಇನ್ನಿತರ ಹದಿಮೂರು ಸದಸ್ಯರನ್ನು ಆರಿಸಲಾಯಿತು. ಕಾಸರಗೋಡು ಜಿಲ್ಲಾ ಗೋರಕ್ಷಾ ಪ್ರಮುಖರಾದ ರವಿಚಂದ್ರ ಎಡನೀರು, ಪಯಸ್ವಿನಿ ಸೊಸೈಟಿಯ ಉಪಾಧ್ಯಕ್ಷ ಶಿವಕೃಷ್ಣ ಭಟ್, ರಾಮಕೃಷ್ಣ ಭಟ್, ಕಾಸರಗೋಡು ಗ್ರಾಮಾಂತರ ಪ್ರಖಂಡ ಉಪಾಧ್ಯಕ್ಷರಾದ ಕೃಷ್ಣನ್ ಅಮ್ಮಂಗೋಡು, ಪ್ರಖಂಡ ಕಾರ್ಯದರ್ಶಿ ಯೋಗೀಶ ಮಧೂರು, ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ ಬಾಬು ಕಾನತ್ತೂರು ಉಪಸ್ಥಿತರಿದ್ದರು. ಪ್ರಶಾಂತ್ ಕಲ್ಲಂಕೂಡ್ಲು ಸ್ವಾಗತಿಸಿ,. ಚಂದ್ರನ್ ಕಾರಡ್ಕ ವಂದಿಸಿದರು.