ಇಂದು(ಮಂಗಳವಾರ) ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದ್ದು, ಪತ್ನಿ ಆಶಾ ಅವರು ಬಟ್ಟೆ ಒಗೆಯುತ್ತಿದ್ದಾಗ ಶಬ್ಧ ಕೇಳಿ ಬಂದಿದ್ದು, ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕಿರುಚಾಟ ಕೇಳಿದ ಅಕ್ಕಪಕ್ಕದವರು ದೌಡಾಯಿಸಿ ಬಂದು ಕುಣಿಕೆ ತೆಗೆದು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲು ಸಾಧ್ಯವಾಗಿಲ್ಲ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸ್ಪಷ್ಟ ಕಾರಣ ಗೊತ್ತಿಲ್ಲ ಎಂದು ಸಂಬಂಧಿಕರು ಪ್ರತಿಕ್ರಿಯಿಸಿದ್ದಾರೆ. ದಂಪತಿಗೆ ಮಕ್ಕಳಿಲ್ಲ. ಪ್ರವೀಣ್ ರಾಜ್ ಮೃತ ಸಂಜೀವಶೆಟ್ಟಿ-ಸುನಂದಾ ದಂಪತಿಯ ಪುತ್ರ. ಸಹೋದರರು: ಸುಧೀರ್ ಮತ್ತು ಪ್ರಕಾಶ್. ಪ್ರವೀಣ್ ರಾಜ್ ಅವರ ಅತ್ಯುತ್ತಮ ಕೆಲಸಕ್ಕಾಗಿ ಮೂವರು ಕಲೆಕ್ಟರ್‌ಗಳಿಂದ ಉತ್ತಮ ಸೇವಾ ಪ್ರಮಾಣಪತ್ರವನ್ನು ಹೊಂದಿದವರಾಗಿದ್ದರು.