ಮಹೂ : ಭದ್ರತೆಯ ವಿಚಾರದಲ್ಲಿ ಭಾರತ ಅದೃಷ್ಟಶಾಲಿ ದೇಶ ಅಲ್ಲ. ಆಂತರಿಕ ಮತ್ತು ಬಾಹ್ಯ ವಿರೋಧಿಗಳ ಮೇಲೆ ಸೈನಿಕರು ಯಾವಾಗಲೂ ಹದ್ದಿನ ಕಣ್ಣಿಡಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದರು.
ಇಂದೋರ್‌ನಲ್ಲಿರುವ ಎರಡು ದಶಕಗಳಿಗೂ ಹಳೆಯದಾದ ಮಹೂ ಕಂಟೋನ್ಮೆಂಟ್‌ನಲ್ಲಿ ಸೇನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಭಾರತದ ಉತ್ತರ ಮತ್ತು ಪಶ್ಚಿಮ ಗಡಿಯಲ್ಲಿ ಸವಾಲುಗಳು ಎದುರಾಗುತ್ತಲೇ ಇರುತ್ತವೆ' ಎಂದು ಹೇಳಿದರು.
ಆಂತರಿಕವಾಗಿಯೂ ಸವಾಲುಗಳನ್ನು ಎದುರಿಸುತ್ತಿರುತ್ತೇವೆ. ನಮ್ಮ ಶತ್ರುಗಳು ಯಾವಾಗಲೂ ಸಕ್ರಿಯರಾಗಿರುತ್ತಾರೆ. ಹೀಗಾಗಿ ಅವರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಬೇಕಾಗುತ್ತದೆ ಮತ್ತು ಅವರ ವಿರುದ್ಧ ಸಕಾಲಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಆತ್ಮನಿರ್ಭರ ದೇಶವನ್ನಾಗಿಸುವಲ್ಲಿ ಸೇನೆಯ ಪಾತ್ರ ಮಹತ್ವದ್ದು ಎಂದು ಹೇಳಿದರು.