ಕಾಸರಗೋಡು: ಮಲಬಾರ್ ಪ್ರದೇಶದ ವಿವಿಧೆಡೆ ಮಹಿಳೆಯರನ್ನು ಕೇಂದ್ರೀಕರಿಸಿ ವಾಮಾಚಾರ, ದುರ್ಮಂತ್ರವಾದ ಪ್ರಕ್ರಿಯೆ ರಹಸ್ಯವಾಗಿ ನಡೆಯುತ್ತಿರುವುದು ಮಹಿಳಾ ಆಯೋಗದ ಗಮನಕ್ಕೆ ಬಂದಿದ್ದು, ಇದರ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂಬುದಾಗಿ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪಿ.ಕುಞËಯಿಷಾ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳಾ ಆಯೋಗದ ಅದಾಲತ್‍ನಲ್ಲಿ ದಊರು ಸವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಮಹಿಳೆಯರ ಶೋಷಣೆ ವಿರುದ್ಧ ಜಾಗೃತ ಸಮಿತಿಗಳು ಮಧ್ಯ ಪ್ರವೇಶಿಸಲು ಸೂಚಿಸಲಾಗುವುದು. ಈ ಬಗ್ಗೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ದೂರುಗಳೂ ಬಂದಿವೆ. ವಾಮಾಚಾರದ ಹೆಸರಿನಲ್ಲಿ ಬಡ ಹೆಣ್ಮಕ್ಕಳನ್ನು ಶೋಷಣೆ ನಡೆಸುವವರ ವಿರುದ್ಧ ಸಾರ್ವಜನಿಕ ಜಾಗೃತಿ ಅಗತ್ಯವಿದೆ. ಸಾಮಾನ್ಯ ಮಹಿಳೆಯರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ವಾಮಾಚಾರ, ವಾಮಾಚಾರಕ್ಕೆ ದಾರಿ ಮಾಡಿಕೊಡುವವರ ವಿರುದ್ಧ ಕ್ರಮ ಅಗತ್ಯ. ಇಂತಹ ಸಮಸ್ಯೆಗಳನ್ನು ಎದುರಿಸಲು ಜಾಗೃತ ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
38 ದಊರುಗಳ ಪರಿಗಣನೆ:
ಕಾಸರಗೋಡಿನಲ್ಲಿ ಸೋಮವಾರ ನಡೆದ ದುರು ಪರಿಹಾರ ಅದಾಲತ್‍ನಲ್ಲಿ 38 ದೂರುಗಳನ್ನು ಪರಿಗಣಿಸಲಾಗಿದ್ದು, ಈ ಪೈಕಿ ಏಳು ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. 31 ದೂರುಗಳನ್ನು ಮುಂದಿನ ಸಭೆಯಲ್ಲಿ ಪರಿಗಣಿಸಲು ತೀರ್ಮಾನಿಸಲಾಯಿತು. ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹೊಸದಾಗಿ ದೂರುಗಳನ್ನು ಸ್ವೀಕರಿಸಲಾಯಿತು. ಪಿ ಸಿಂಧು, ಎಎಸ್‍ಐ ಅನಿತಾ, ಕಾನೂನು ಸಹಾಯಕಿ ರಮ್ಯಾ ಹಾಗೂ ಮಹಿಳಾ ರಕ್ಷಣಾಧಿಕಾರಿ ಜ್ಯೋತಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.