HEALTH TIPS

ಕಾಂಗ್ರೆಸ್​ ಸರ್ಕಾರ ಅಂಬೇಡ್ಕರ್​ರನ್ನು ನಡೆಸಿಕೊಂಡ ಇಂಚಿಂಚು ಮಾಹಿತಿ ನೀಡಿದ ಸಚಿವ ರಿಜೆಜು! ಭಾರಿ ಚರ್ಚೆ

ನವದೆಹಲಿ: ಡಾ.ಬಿ.ಆರ್​.ಅಂಬೇಡ್ಕರ್​ ಕುರಿತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಮಾಡಿರುವ ಭಾಷಣ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ಅಮಿತ್​ ಷಾ ಅವರ ಭಾಷಣವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಸುಖಾ ಸುಮ್ಮನೆ ಕಾಂಗ್ರೆಸ್​ನವರು ಗಲಾಟೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದ್ದರೆ, ಕಾಂಗ್ರೆಸ್​ನವರು ಮಾತ್ರ ಅಮಿತ್​ ಶಾ, ಅಂಬೇಡ್ಕರ್​ ಅವರಿಗೆ ಅವಮಾನ ಮಾಡಿದ್ದಾರೆ ಎಂದು ವಾದಿಸುತ್ತಿದ್ದಾರೆ.

ಇದು ಬಹು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸ ಆಗುತ್ತಿರುವ ನಡುವೆಯೇ, ಸಂಸತ್ತಿನಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಾಡಿರುವ ಭಾಷಣ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗುತ್ತಿದೆ.

ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಷಯವನ್ನು ಸಚಿವರು ಪ್ರಸ್ತಾಪಿಸಿದರು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೊದಲ ಕಾನೂನು ಸಚಿವ ಡಾ.ಬಿ.ಆರ್. ಅಂಬೇಡ್ಕರ್ ಅವರು ರಾಜೀನಾಮೆ ನೀಡುವಾಗ ಅವರಿಗೆ ಬರೆದ ಪತ್ರವನ್ನೂ ಉಲ್ಲೇಖಿಸುವ ಮೂಲಕ ಕಾಂಗ್ರೆಸ್​ ಅಂಬೇಡ್ಕರ್​ ಅವರನ್ನು ನಡೆಸಿಕೊಂಡ ರೀತಿಯನ್ನು ವಿವರಿಸಿದ್ದಾರೆ. ಅಂದಿನ ಸಚಿವರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಅಂಬೇಡ್ಕರ್ ಅವರನ್ನು ಕೂಡ ಮೊದಲ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳಲು ಮಹಾತ್ಮ ಗಾಂಧಿ ಅವರು ನೆಹರು ಅವರನ್ನು ಕೇಳಿದ್ದರು. ಅರ್ಥಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಯಾಗಿ ಅಂಬೇಡ್ಕರ್ ಅವರು ಆರ್ಥಿಕತೆಗೆ ಕೊಡುಗೆ ನೀಡುತ್ತಾರೆ ಎನ್ನುವುದು ಅವರ ಮಾತಾಗಿತ್ತು. ಆದರೆ ನೆಹರೂ ಅವರು ಹಾಗೆ ಮಾಡಲಿಲ್ಲ. ಸಚಿವ ಸಂಪುಟದ ಯಾವುದೇ ಸಮಿತಿಯಲ್ಲೂ ಅಂಬೇಡರ್ಕರ್​ ಅವರನ್ನು ಸೇರಿಸಲಾಗಿಲ್ಲ. ಇದು ಅಂಬೇಡ್ಕರ್​ ಅವರಿಗೆ ನೋವು ಉಂಟು ಮಾಡಿತ್ತು. ಕೊನೆಗೆ ಅಂಬೇಡ್ಕರ್​ ಅವರಿಗೆ ಯೋಜನಾ ಖಾತೆಯನ್ನೂ ನೀಡಿಲ್ಲ ಎಂದಿದ್ದಾರೆ ರೆಜೆಜು.

'ಅಂಬೇಡ್ಕರ್ ಅವರು ಸಂಸದರಾಗಿ ಮರಳಲು ಬಯಸಿದ್ದರು, ಆದರೆ ಚುನಾವಣೆಯಲ್ಲಿ ಅವರ ಸೋಲನ್ನು ಕಾಂಗ್ರೆಸ್ ಖಚಿತಪಡಿಸಿತ್ತು. ಕಾಂಗ್ರೆಸ್ ನಾಯಕ ನೆಹರು ಅವರು ಮುಸ್ಲಿಮರ ಬಗ್ಗೆ ಅನುಕಂಪ ಹೊಂದಿದ್ದರೂ ಒಮ್ಮೆಯೂ ಪರಿಶಿಷ್ಟ ಜಾತಿಗಳ ಕಲ್ಯಾಣದ ಬಗ್ಗೆ ಮಾತನಾಡಿಲ್ಲ ಎಂದು ಅಂಬೇಡ್ಕರ್ ಅವರೇ ಖುದ್ದು ಬರೆದಿದ್ದಾರೆ ಎಂದು ಪ್ರತಿಪಾದಿಸಿದ ಸಚಿವರು, ಇನ್ನು ದಲಿತರು ಕಾಂಗ್ರೆಸ್ ಪಕ್ಷದಿಂದ ಯಾವ ಅನುಕಂಪವನ್ನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ. ಮೀಸಲಾತಿಯ ಬಗ್ಗೆ ಅಂಬೇಡ್ಕರ್ ಅವರ ದೃಷ್ಟಿಕೋನವು ಸಾಮಾಜಿಕ ನ್ಯಾಯದ ಪ್ರಾಮುಖ್ಯತೆಯ ಬಗ್ಗೆ ಇತ್ತು. ಆದರೆ, ನೆಹರೂ ಅವರಿಗೆ ಇದು ಈ ಗುಂಪುಗಳ ಏಕೀಕರಣಕ್ಕೆ ತಾತ್ಕಾಲಿಕ ಕ್ರಮವಾಗಿತ್ತಷ್ಟೇ ಎಂದರು.

1990ರವರೆಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಏಕೆ ನೀಡಲಿಲ್ಲ? ನೆಹರೂ ಮತ್ತು ಇಂದಿರಾಗಾಂಧಿ ತಮಗೆ ತಾವೇ ಭಾರತ ರತ್ನ ನೀಡಿಕೊಂಡರು. ಬಾಬಾಸಾಹೇಬರಿಗೆ ಭಾರತರತ್ನ ನೀಡಿದ್ದು ವಿ.ಪಿ.ಸಿಂಗ್ ಸರ್ಕಾರ. ಅವರು ಭಾರತ ರತ್ನಕ್ಕೆ ಅರ್ಹರಾದ ಮೊದಲ ವ್ಯಕ್ತಿಯಾಗಿದ್ದರು. ಆದರೂ ಕಾಂಗ್ರೆಸ್​ ಅವರನ್ನು ಕಡೆಗಣಿಸಿತು ಎಂದರು. "ಮೋದಿ-ಜಿ ಅವರು ಡಾ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ತೀರ್ಥಸ್ಥಳಗಳಿಗೆ (ಯಾತ್ರಾ ಸ್ಥಳಗಳು) ಪ್ರಾಮುಖ್ಯತೆ ನೀಡಿದರು. ಅವರ ಜನ್ಮಸ್ಥಳವನ್ನು ಅಭಿವೃದ್ಧಿಪಡಿಸಲಾಯಿತು, ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದ ಮನೆಯನ್ನು ಖರೀದಿಸಿ ಶಿಕ್ಷಾ ಭೂಮಿ ಎಂದು ಘೋಷಿಸಿದ್ದಾರೆ. ಅವರು ನಿಧನರಾದ ಸ್ಥಳವನ್ನು ಪರಿನಿರ್ವಾಣ ಭೂಮಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ಸ್ಮಾರಕ ಬಂದಿದೆ. ಮುಂಬೈನಲ್ಲಿ ಬಾಬಾಸಾಹೇಬರ ಚೈತ್ಯ ಭೂಮಿಯನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಮುಂಬೈನಲ್ಲಿ 430 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣವಾಗಲಿದೆ. ಇದು 25-30 ಕಿಮೀ ದೂರದಿಂದಲೂ ಗೋಚರಿಸುತ್ತದೆ. ಕಾಂಗ್ರೆಸ್​ ಸರ್ಕಾರ ಮಾಡಿದ್ದೇನು' ಎಂದು ಪ್ರಶ್ನಿಸಿದ್ದಾರೆ.

1980ರಲ್ಲಿ ಮಂಡಲ್ ಆಯೋಗದ ವರದಿ ಬಂದ ನಂತರ ಅದನ್ನು 10 ವರ್ಷಗಳ ಕಾಲ ನೆನಗುದಿಗೆ ಇರಿಸಲಾಯಿತು. ಬಿಜೆಪಿ ಬೆಂಬಲಿತ ವಿ.ಪಿ ಸಿಂಗ್ ಸರ್ಕಾರವೇ ಇದನ್ನು ಜಾರಿಗೆ ತರಲು ನಿರ್ಧರಿಸಿತು. ರಾಜೀವ್ ಗಾಂಧಿ ಮತ್ತು ನೆಹರೂ ಏನು ಹೇಳಿದರು ಎಂಬುದು ನಮಗೆಲ್ಲರಿಗೂ ತಿಳಿದಿದೆ ಎಂದು ಸಚಿವ ರಿಜೆಜು ಹೇಳಿದರು. ಇದೀಗ ಅಂಬೇಡ್ಕರ್​ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಹಾಗೂ ರಿಜೆಜು ಅವರ ಮಾತಿನ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತದೆ. ಅಂಬೇಡ್ಕರ್ ಅವರು ನಿಧನರಾದಾಗ ಕಾಂಗ್ರೆಸ್ಸಿಗರು ಅವ್ರನ್ನು ಮಣ್ಣು ಮಾಡಲು ಜಾಗ ಕೊಡಲಿಲ್ಲ. ಅವರು ಚುನಾವಣೆಗೆ ನಿಂತಾಗ ಸ್ವತಃ ನೆಹರು ಅವು ತಮ್ಮ ಕಾರಿನ ಡ್ರೈವರ್​ನನ್ನು ಅಂಬೇಡ್ಕರ್ ವಿರುದ್ಧ ನಿಲ್ಲಿಸಿ ಗೆಲ್ಲಿಸಿದ್ರು. ಈಗ ನೀವ್ ಅಂಬೇಡ್ಕರ್ ಫೋಟೋ ಹಿಡಿದುಕೊಂಡು ಮೊಸಳೆ ಕಣ್ಣೀರು ಹಾಕ್ತಾ ಇದ್ದೀರಾ ಎಂದೆಲ್ಲಾ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries