ಕೊಚ್ಚಿ: ಉದಯಂಪೇರೂರಿನಲ್ಲಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ 9.30ರ ಸುಮಾರಿಗೆ ಕಂಡನಾಡು ಜೆಬಿ ಶಾಲೆಯ 100 ವರ್ಷ ಹಳೆಯ ಕಟ್ಟಡದ ಮೇಲ್ಛಾವಣಿ ಕುಸಿದಿದೆ.
ಅಪಘಾತದ ವೇಳೆ ಮಕ್ಕಳು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಈ ಕಟ್ಟಡದಲ್ಲಿ ಶಾಲೆಯ ಅಂಗನವಾಡಿ ಕಾರ್ಯನಿರ್ವಹಿಸುತ್ತಿತ್ತು.
ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದ್ದು ಇಲ್ಲಿ ವ್ಯಾಸಂಗ ಮಾಡುವುದರಿಂದ ಮಕ್ಕಳ ಜೀವಕ್ಕೆ ಅಪಾಯವಾಗುವುದನ್ನು ಮನಗಂಡು ಪಕ್ಕದ ಕಟ್ಟಡಕ್ಕೆ ತರಗತಿ ಬದಲಾಯಿಸಲಾಗಿತ್ತು. ಆದರೆ ಕುಸಿದು ಬಿದ್ದಿದ್ದ ಹಳೆಯ ಕಟ್ಟಡದಲ್ಲಿ ಮಕ್ಕಳ ಮಧ್ಯಾಹ್ನದ ಊಟ ವ್ಯವಸ್ಥೆ ನಡೆಸಲಾಗುತ್ತಿತ್ತು. ಮಧ್ಯಾಹ್ನ ವೇಳೆ ಛಾವಣಿ ಬೀಳದಿದ್ದುದು ಅದೃಷ್ಟವೆಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಕಟ್ಟಡದಲ್ಲಿ ಶುಕ್ರವಾರ ಶಾಲೆಯ ಕ್ರಿಸ್‍ಮಸ್ ಆಚರಣೆ ನಡೆಯಬೇಕಿದ್ದ ವೇಳೆ ಅವಘಡ ಸಂಭವಿಸಿದೆ.
ಕಟ್ಟಡ ಹಾನಿಗೊಂಡಿರುವ ವಿಷಯ ತಿಳಿದ ವಾರ್ಡ್ ಕೌನ್ಸಿಲರ್‍ಗಳು, ಉದಯಂಪೇರೂರು ಪೋಲೀಸರು ಹಾಗೂ ಸ್ಥಳೀಯ ಜನರು ಶಾಲೆಗೆ ದೌಡಾಯಿಸಿದ್ದರು.