ಲಖನೌ: ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೆಲ್ವಿ ಅವರು, ಮುಸ್ಲಿಮರು ಹೊಸ ವರ್ಷಾಚರಣೆ ಮಾಡದಂತೆ ಸೂಚಿಸಿ ಬರೇಲಿಯಲ್ಲಿ ಭಾನುವಾರ ಫತ್ವಾ ಹೊರಡಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಮೌಲಾನಾ, 'ಯುವಕ-ಯುವತಿಯರು ಹೊಸ ವರ್ಷ ಆಚರಿಸುವುದು ಅಥವಾ ಕ್ರಿಶ್ಚಿಯನ್ನರ ಹೊಸ ವರ್ಷದ ಪ್ರಯುಕ್ತ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಹೆಮ್ಮೆಯ ಸಂಗತಿಯಲ್ಲ' ಎಂದಿದ್ದಾರೆ.
'ಧಾರ್ಮಿಕವಲ್ಲದ ಯಾವುದೇ ರೂಢಿಗಳನ್ನು ಆಚರಿಸುವುದನ್ನು ಮುಸ್ಲಿಮರಿಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆ ಮಾಡದಂತೆ ಯುವಕ-ಯುವತಿಯರಿಗೆ ಸೂಚಿಸಲಾಗಿದೆ. ಮುಸ್ಲಿಮರು ಹೊಸ ವರ್ಷ ಆಚರಿಸುವುದನ್ನು ತಡೆಯಬೇಕು' ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ರಾಜ್ಯ ಸಜ್ಜಾಗಿದೆ. 12 ವರ್ಷಗಳಿಗೊಮ್ಮೆ ಈ ಕುಂಭಮೇಳ ನಡೆಯುತ್ತದೆ.