ಕೊಚ್ಚಿ: ಸಿಡಿಮದ್ದು ಪ್ರದರ್ಶನಕ್ಕೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿರುವ ಕೇಂದ್ರ ಅಧಿಸೂಚನೆ ವಿರುದ್ಧ ತಿರುವಂಬಾಡಿ ಮತ್ತು ಪರಮೆಕ್ಕಾವ್ ದೇವಸ್ವಂಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಕ್ಟೋಬರ್ 11ರಂದು ಹೊರಡಿಸಿರುವ ಗೆಜೆಟ್ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂಬುದು ರಿಟ್ ಅರ್ಜಿಯಲ್ಲಿನ ಆಗ್ರಹಿಸಲಾಗಿದೆ.
ಕೇಂದ್ರ ಅಧಿಸೂಚನೆಯಲ್ಲಿನ ಷರತ್ತುಗಳಿಂದಾಗಿ ಈಗ ಉತ್ಸವ ಪಟಾಕಿಗಳಿಗೆ ಅನುಮತಿ ನಿರಾಕರಿಸಲಾಗಿದೆ. 2006ರ ಸ್ಫೋಟಕ ಆರ್ಡನೆನ್ಸ್ ಕಾಯ್ದೆಯ ನಿಬಂಧನೆಗಳಿಗೆ ಗೆಜೆಟ್ ವಿರುದ್ಧವಾಗಿದೆ ಎಂದು ದೇವಸ್ವಮ್ ಅರ್ಜಿಯಲ್ಲಿ ತಿಳಿಸಿದೆ. ಜನವರಿ 3ರಂದು ಪರಮೆಕ್ಕಾವಿನ ಉತ್ಸವ ನಡೆಯಬೇಕಿದೆ. ಜನವರಿ 5ಕ್ಕೆ ತಿರುವಂಬಾಡಿಯವರ ಉತ್ಸವ ಸಿದ್ದತೆಯಲ್ಲಿದೆ.
ಕೇಂದ್ರದ ಹೊಸ ಸ್ಫೋಟಕ ಸುಗ್ರೀವಾಜ್ಞೆ ಕಾಯ್ದೆ ಪ್ರಕಾರ ಪಟಾಕಿ ಸಿಡಿಸುವ ಭೌತಿಕ ಸ್ಥಿತಿ ಇಲ್ಲದ ಕಾರಣ ಜನರ ಪ್ರಾಣ ಮತ್ತು ಆಸ್ತಿಪಾಸ್ತಿಗೆ ಧಕ್ಕೆಯಾಗದಂತೆ ಪಟಾಕಿ ಸಿಡಿಸಲು ಜಿಲ್ಲಾಧಿಕಾರಿ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದ್ದಾರೆ.
ತ್ರಿಶೂರ್ ಪೂರಂ ಸಿಡಿಮದ್ದು ಪ್ರದರ್ಶನ ನಡೆಯುವ ತೇಕಿಂಕಡ್ ಮೈದಾನದಲ್ಲಿ ಮಾಲೆ ಪಟಾಕಿ ಸಹಿತ ದೊಡ್ಡ ಪ್ರಮಾಣದ ಸಿಡಿಮದ್ದು ಪ್ರದರ್ಶನ ನಡೆಯುತ್ತದೆ. ಪಟಾಕಿ ಇಡುವ ಶೆಡ್ ಹಾಗೂ ಪಟಾಕಿ ಸಿಡಿಸುವ ಸ್ಥಳದ ಅಂತರ ಕೇವಲ 78 ಮೀಟರ್ ಆಗಿರುವುದು ಅನುಮತಿ ನಿರಾಕರಿಸಲು ಕಾರಣವಾಗಿದೆ. ಹೊಸ ಕಾನೂನಿನ ಪ್ರಕಾರ 200 ಮೀಟರ್ ಅಂತರದ ಅಗತ್ಯವಿದೆ ಎಂದು ವಿವಿಧ ಇಲಾಖೆಗಳ ವರದಿಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾಧಿಕಾರಿಗಳು ದೇವಸ್ವಂಗಳ ಅರ್ಜಿಯನ್ನು ತಿರಸ್ಕರಿಸಿದ್ದರು.