ಮಂಜೇಶ್ವರ: ನಮ್ಮ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಂಘಟನೆಯ ಪಾತ್ರ ಪ್ರಮುಖವಾದುದ್ದು ಎಂದು ಕೇರಳ ರಾಜ್ಯ ಪ್ರೈಮರಿ ಮುಖ್ಯೋಪಾಧ್ಯಾಯ ಸಂಘದ ರಾಜ್ಯ ಉಪಾಧ್ಯಕ್ಷ ರಾಜೀವನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಜತ್ತೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಜರುಗಿದ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಮುಖ್ಯೋಪಾಧ್ಯಾಯ ಸಂಘದ ಜಿಲ್ಲಾಧ್ಯಕ್ಷೆ ರೇಖಾ ಹಾಗೂ ಕಾರ್ಯದರ್ಶಿ ಶ್ರೀವಲ್ಸನ್ ಅವರು ಸಂಘದ ಕಾರ್ಯ ಚಟುವಟಿಕೆ ತಿಳಿಸಿದರು. ಜಿಲ್ಲಾ ಸಮಿತಿ ಮಾಜಿ ಕಾರ್ಯದರ್ಶಿ ವಸಂತ ಕುಮಾರ್ ಸಿ.ಕೆ. ಶುಭ ಹಾರೈಸಿದರು. ಉಪಜಿಲ್ಲಾ ಅಧ್ಯಕ್ಷ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚಿತ್ರಾವತಿ ಗತವರ್ಷದ ವರದಿ ವಾಚಿಸಿದರು.ಹಿರಿಯ ಸದಸ್ಯ ಗೋಪಣ್ಣ, ಮೊಹಮ್ಮದ್ ಅನಿಸಿಕೆ ವ್ಯಕ್ತಪಡಿಸಿದರು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.ಅಧ್ಯಕ್ಷರಾಗಿ ಸುರೇಶ ಬಂಗೇರ ಮತ್ತು ಪ್ರಧಾನಕಾರ್ಯದರ್ಶಿಯಾಗಿ ಸಿಲ್ವಿಯಾ ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ಸವಿತಾ, ವೀಣಾಕುಮಾರಿ, ಸಹಕಾರ್ಯದರ್ಶಿಯಾಗಿ ಇಸ್ಮಾಯಿಲ್, ಮಾಲತಿ, ಖಜಾಂಜಿಯಾಗಿ ಶಂಕರ ನಾರಾಯಣ ಭಟ್ ಆಯ್ಕೆಯಾದರು. ಜಿಲ್ಲಾ ಸಮಿತಿಗೆ ಶಿವರಾಮ ಭಟ್, ಸುಕೇಶ್, ಚಿತ್ರಾವತಿ ಅವರನ್ನು ಆರಿಸಲಾಯಿತು. ಕಾರ್ಯಕಾರಿ ಸದಸ್ಯರಾಗಿ ಉಮೇಶ, ಅಶೋಕನ್, ಲೀಲಾ ಅವರನ್ನು ಹಾಗೂ ಐ.ಟಿ. ವಿಭಾಗಕ್ಕೆ ಸತ್ಯ ಪ್ರಕಾಶ್, ಫಾತಿಮತ್ ಝೌರ ಅವರನ್ನು ಆಯ್ಕೆ ಮಾಡಲಾಯಿತು.. ಅಧಿಕೃತ ವಕ್ತಾರ ರಾಧಾಕೃಷ್ಣ .ಕೆ. ಸ್ವಾಗತಿಸಿ, ಪ್ರತಿಭಾ ವಂದಿಸಿದರು. ಸುರೇಶ ಬಂಗೇರ ಕಾರ್ಯಕ್ರಮ ನಿರೂಪಿಸಿದರು.