ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಎರಡು ದಿವಸಗಳಿಂದ ಸಉರಿದ ಬಿರುಸಿನ ಮಳೆಗೆ ಮಳೆಯಾಗುತ್ತಿದ್ದು, ಕಾಸರಗೋಡು ಅಡ್ಕತಬೈಲ್‍ನಲ್ಲಿ ಮನೆಯೊಂದರ ಮೇಲ್ಚವಣಿ ಸಂಪೂರ್ಣವಾಗಿ ಕುಸಿದು ಹಾನಿ ಸಂಭವಿಸಿದೆ. ಕಿಶೋರ್ ಕುಮಾರ್-ಶಶಿಕಲಾ ದಂಪತಿ ಮನೆ ಬುಧವಾರ ನಸುಕಿಗೆ ಏಕಾಏಕಿ ಕುಸಿದು ಬಿದ್ದಿದೆ. ದಂಪತಿ ಕೊಠಡಿಯೊಳಗೆ ಮಲಗಿದ್ದು, ಶಬ್ದ ಕೇಳುತ್ತಿದ್ದಂತೆ ಮನೆಯಿಂದ ಹೊರಕ್ಕೆ ಓಡಿಬಂದ ಕಾರಣ ಅಪಾಯದಿಂದ ಪಾರಾಗಿದ್ದರು.
ಹೆಂಚುಹಾಸಿನ ಮನೆ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಕಾಸರಗೋಡು ನಗರಸಭೆಗೆ ಮನವಿ ಸಲ್ಲಿಸಿದ್ದರೂ, ದುರಸ್ತಿಗೆ ಹಣ ಮಂಜೂರುಮಾಡದೆ ಸತಾಯಿಸಿರುವುದಾಗಿಯೂ ದಂಪತಿ ದೂರಿದ್ದಾರೆ. ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿರುವ ದಂಪತಿ ಕುಟುಂಬ ಮನೆಯಿಲ್ಲದೆ ಕಂಗಾಲಾಗಿದೆ.