HEALTH TIPS

ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ, ಸುಂದರ ಸಂವಿಧಾನವಾಗಿದೆ: ಕೇಂದ್ರ ಸಚಿವ ಕಿರಣ್ ರಿಜಿಜು

ನವದೆಹಲಿ: ಭಾರತದ ಸಂವಿಧಾನವು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಹಾಗೂ ಸುಂದರ ಸಂವಿಧಾನವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಶುಕ್ರವಾರ ಹೇಳಿದರು.

ಲೋಕಸಭೆಯಲ್ಲಿ ನಡೆದ ಭಾರತ ಸಂವಿಧಾನದ 75 ನೇ ವಾರ್ಷಿಕೋತ್ಸವ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಮೊದಲು ವಿಮಾನ, ನಂತರ ಕಾರುಗಳನ್ನು ನೋಡಿದ ಪ್ರದೇಶದಿಂದ ಬಂದ ವ್ಯಕ್ತಿ ನಾನು. ಏಕೆಂದರೆ, ನಾನು ಸಂಸದನಾದ ಬಳಿಕ ರಸ್ತೆಗಳ ಅಭಿವೃದ್ಧಿಪಡಿಸಲಾಗಿತ್ತು. ನಂತರ, ಕಾರುಗಳ ಓಡಾಟ ಆರಂಭವಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಾಬಾಸಾಹೇಬ್ ಭೀಮ್'ರಾವ್ ಅಂಬೇಡ್ಕರ್ ಅವರು ಕುಳಿತುಕೊಳ್ಳುತ್ತಿದ್ದ ಜಾಗವನ್ನು ನನಗೆ ಕೊಟ್ಟಿದ್ದಾರೆ.

ನಾನು ಈ ದೇಶದ ಕಾನೂನು ಸಚಿವನಾದಾಗ, ಪ್ರಮಾಣವಚನ ಸ್ವೀಕರಿಸುವ ಮೊದಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮನಸ್ಸಿನಲ್ಲಿ ಏನನ್ನು ಬಯಸಿದ್ದರು, ಅವರು ಮಾಡಲು ಸಾಧ್ಯವಾಗದ ಎಲ್ಲಾ ವಿಷಯಗಳು ಮತ್ತು ಆಲೋಚನೆಗಳು ಏನೆಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೆ, ನಮ್ಮ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವಷ್ಟೇ ಅಲ್ಲ, ವಿಶ್ವದ ಅತ್ಯಂತ ಸುಂದರವಾದ ಸಂವಿಧಾನವಾಗಿದೆ ಎಂದು ಹೇಳಿದರು.

ಬಿಆರ್ ಅಂಬೇಡ್ಕರ್ ಅವರ ಆಲೋಚನೆಗಳು ಮತ್ತು ಅವರ ಬರಹಗಳನ್ನು ಅವರ ಮರಣದ ನಂತರ ತಪ್ಪಾಗಿ ಅರ್ಥೈಸಲಾಗಿದೆ, ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿದ್ದರು ನಿಜ, ಆದರೆ ಅವರು ಎಂದಿಗೂ ಹಿಂದೂ ಧರ್ಮವನ್ನು ದ್ವೇಷಿಸಲಿಲ್ಲ. ಬಿಆರ್ ಅಂಬೇಡ್ಕರ್ ಅವರು ಯಾವುದೇ ಧರ್ಮದ ವಿರುದ್ಧ ಮಾತನಾಡಿಲ್ಲ, ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆಯಂತಹ ಕೆಲವು ಆಚರಣೆಗಳಿದ್ದವು, ಈ ಪದ್ಧತಿಗಳ ವಿರುದ್ಧ ಹೋರಾಡಿದದ್ದರು. ದೀಕ್ಷೆಯನ್ನು ಸ್ವೀಕರಿಸಿದ್ದರು. ಕೆಲವು ತಿಂಗಳುಗಳ ನಂತರ ಅವರು ಬೌದ್ಧ ದೀಕ್ಷೆ ಪಡೆದ ನಂತರ ಮರಣವನ್ನಪ್ಪಿದ್ದರು. ಬಳಿಕ ಅವರ ಮನಸ್ಸಿನಲ್ಲಿದ್ದ ಆಲೋಚನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ.

ಅಂಬೇಡ್ಕರ್ ಅವರ ಮರಣ ನಂತರ ಅವರ ಚಿಂತನ ಹಾಗೂ ಬರಹಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಅಂಬೇಡ್ಕರ್ ಅವರು ಹಿಂದೂ ಧರ್ಮ ತ್ಯಜಿಸಿದ್ದರು. ಹಾಗಾಗಿ ನಾವು ಅದರ ವಿರುದ್ಧ ಹೋರಾಡಬೇಕೆಂದು ಹೇಳುತ್ತಾರೆ. ಆದರೆ, ಅಂಬೇಡ್ಕರ್ ಅವರ ಚಿಂತನೆಗಳು ಹಾಗಿರಲಿಲ್ಲ. ಜಾತಿಯ ಶ್ರೇಣಿಯನ್ನು ಹೊಂದಿರದ ಧರ್ಮವನ್ನು ಆಯ್ಕೆ ಮಾಡುತ್ತೇನೆಂದು ಹೇಳಿದ್ದರು. ಅವರು ಹಿಂದೂ ಧರ್ಮದ ವಿರುದ್ಧ ಎಂದಿಗೂ ವಿರೋಧಿಯಾಗಿರಲಿಲ್ಲ ಎಂದು ತಿಳಿಸಿದರು.

ಡಿಸೆಂಬರ್ 13 ರಂದು ಲೋಕಸಭೆಯು ಸಂವಿಧಾನದ 75 ನೇ ವರ್ಷದ ಆರಂಭದ ಸ್ಮರಣಾರ್ಥ ಎರಡು ದಿನಗಳ ಚರ್ಚೆಯನ್ನು ಪ್ರಾರಂಭಿಸಿತು. ಶುಕ್ರವಾರ, ಚರ್ಚೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ನಡುವೆ ವಾಗ್ಯುದ್ಧವೇ ನಡೆಯಿತು. ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 20ರವರೆಗೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries