ಗುವಾಹಟಿ: ಇಲ್ಲಿನ ಶ್ರೀಭೂಮಿ ಜಿಲ್ಲೆಯಲ್ಲಿ ಬಾಂಗ್ಲಾದೇಶದ ನಿವಾಸಿ ಅಲಿ ಬಹಾರ್ ಎಂಬುವವರನ್ನು ಭಾನುವಾರ ಬಂಧಿಸಿದ್ದು, ನಂತರ ಅವರ ದೇಶಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ವ್ಯಕ್ತಿಯು ಯಾವ ಭಾಗದಲ್ಲಿ ಭಾರತದ ಒಳಗೆ ನುಸುಳಲು ಯತ್ನಿಸಿದ್ದರು ಎಂಬ ಮಾಹಿತಿ ನೀಡಲು ಅವರು ನಿರಾಕರಿಸಿದರು.
ಅಸ್ಸಾಂನ ಶ್ರೀಭೂಮಿ, ಕಛಾರ್, ಧುಬ್ರಿ ಹಾಗೂ ದಕ್ಷಿಣ ಶಾಲ್‌ಮಾರಾ-ಮಾನ್‌ಕಾಚರ್ ಜಿಲ್ಲೆಗಳು ಬಾಂಗ್ಲಾದೇಶದೊಂದಿಗೆ 267.5 ಕಿ.ಮೀ ಉದ್ದದ ಅಂತರರಾಷ್ಟ್ರೀಯ ಗಡಿ ಹಂಚಿಕೊಂಡಿವೆ.