HEALTH TIPS

ಬರ್ಲಿನ್‌ನಿಂದ ಮಾಡಿದ್ದ ಕರೆಗೆ ಗಂಟೆ ಕಾಯಿಸಿದ್ದ ಸೋನಿಯಾ ಗಾಂಧಿ!

ನವದೆಹಲಿ: 'ಅಂತರ ಸಂಸದೀಯ ಒಕ್ಕೂಟದ (ಐಪಿಯು) ಅಧ್ಯಕ್ಷರಾಗಿ 1999ರಲ್ಲಿ ಆಯ್ಕೆಯಾದ ವಿಚಾರವನ್ನು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ತಿಳಿಸಲು ಬರ್ಲಿನ್‌ನಿಂದ ಕರೆ ಮಾಡಿದಾಗ, ಒಂದು ಗಂಟೆಯ ಕಾಲ ನನ್ನನ್ನು ಕಾಯಿಸಲಾಯಿತು. ಮೇಡಂ ಬ್ಯುಸಿ ಇದ್ದಾರೆ ಎಂದು ಅವರ ಸಿಬ್ಬಂದಿ ತಿಳಿಸಿದ್ದರು' ಎಂದು ರಾಜ್ಯಸಭೆಯ ಮಾಜಿ ಉಪಸಭಾಪತಿ ನಜ್ಮಾ ಹೆಫ್ತುಲ್ಲಾ ಹೇಳಿಕೊಂಡಿದ್ದಾರೆ.

ಮಣಿಪುರದ ಮಾಜಿ ರಾಜ್ಯಪಾಲರೂ ಆದ ಅವರು, ಈಚೆಗೆ ಬಿಡುಗಡೆಯಾಗಿರುವ ತಮ್ಮ ಆತ್ಮಚರಿತ್ರೆ 'ಇನ್‌ ಪರ್ಸ್ಯೂಟ್‌ ಆಫ್‌ ಡೆಮಾಕ್ರಸಿ: ಬಿಯಾಂಡ್‌ ಪಾರ್ಟಿ ಲೈನ್ಸ್‌'ನಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

ಸೋನಿಯಾ ಗಾಂಧಿ ಅವರೊಂದಿಗೆ ಭಿನ್ನಾಪ್ರಾಯ ಮೂಡಿದ ಬಳಿಕ ನಜ್ಮಾ ಅವರು 2004ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. 2014ರಲ್ಲಿ ನರೇಂದ್ರ ಮೋದಿ ಸರ್ಕಾರದಲ್ಲಿ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

'ಐಪಿಯು ಅಧ್ಯಕ್ಷ ಸ್ಥಾನವು ನನಗೆ ದೊರೆತ ಅತ್ಯಂತ ದೊಡ್ಡ ಗೌರವ. ಭಾರತೀಯ ಸಂಸತ್ತಿನಿಂದ ವಿಶ್ವ ಸಂಸದೀಯ ಹಂತದವರಿಗೆ ಪ್ರಯಾಣದಲ್ಲಿ ಇದು ನನಗೆ ದೊರೆತ ಅತ್ಯುನ್ನತ ಸ್ಥಾನವಾಗಿದೆ' ಎಂದು ಅವರು ಬಣ್ಣಿಸಿದ್ದಾರೆ.

ಸಂತೋಷ ವ್ಯಕ್ತಪಡಿಸಿದ್ದ ವಾಜಪೇಯಿ:

ಈ ಅತ್ಯುನ್ನತ ಸ್ಥಾನಕ್ಕೆ ಆಯ್ಕೆಯಾದ ಕುರಿತು ಮೊದಲಿಗೆ ಬರ್ಲಿನ್‌ನಿಂದ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಕರೆ ಮಾಡಿದ್ದೆ. ಕರೆ ಸ್ವೀಕರಿಸಿದ್ದ ವಾಜಪೇಯಿ ಅವರು, ಈ ಗೌರವ ಭಾರತಕ್ಕೆ ದೊರೆತಿದ್ದಕ್ಕೆ, ಅದರಲ್ಲೂ ಭಾರತೀಯ ಮುಸ್ಲಿಂ ಮಹಿಳೆಗೆ ಸಂದಿದ್ದಕ್ಕೆ ತುಂಬಾ ಸಂತೋಷ ವ್ಯಕ್ತಪಡಿಸಿದರು ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ ಪ್ರಧಾನಿ ಅವರು, 'ನೀವು ಭಾರತಕ್ಕೆ ಹಿಂತಿರುಗಿದ ಬಳಕ ಈ ಸಂಭ್ರಮವನ್ನು ಆಚರಿಸೋಣ' ಎಂದು ಹೇಳಿದ್ದರು. ನನ್ನ ಈ ಆಯ್ಕೆಯ ಮಾಹಿತಿಯನ್ನು ಉಪ ರಾಷ್ಟ್ರಪತಿ ಕಚೇರಿಗೂ ನೀಡಿದ್ದೆ ಎಂದು ಅವರು ಬರೆದು ಕೊಂಡಿದ್ದಾರೆ.

ಮಾತನಾಡದ ಸೋನಿಯಾ:

'ಆದರೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಮತ್ತು ನನ್ನ ನಾಯಕಿ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿದಾಗ, ನನ್ನನ್ನು ಗಂಟೆ ಕಾಲ ಕಾಯಿಸಿದರು. ನಾನು ಬರ್ಲಿನ್‌ನಿಂದ ಅಂತರರಾಷ್ಟ್ರೀಯ ಕರೆ ಮಾಡಿದ್ದೇನೆ ಎಂದು ಹೇಳಿದಾಗಲೂ, ಮೇಡಂ ಬ್ಯುಸಿ ಇದ್ದಾರೆ ಸ್ವಲ್ಪ ಕಾಯಿರಿ ಎಂದು ಅವರ ಸಿಬ್ಬಂದಿ ತಿಳಿಸಿದರು. ಒಂದು ಗಂಟೆ ಕಾದ ಬಳಿಕವೂ ಸೋನಿಯಾ ಅವರು ನನ್ನೊಂದಿಗೆ ಮಾತನಾಡಲು ಬರಲಿಲ್ಲ. ಇದರಿಂದ ನಿಜವಾಗಿಯೂ ನನಗೆ ತೀವ್ರ ನಿರಾಶೆಯಾಯಿತು' ಎಂದು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಪ್ರಸ್ತಾಪಿಸಿದ್ದಾರೆ.

'ಆ ಬಳಿಕ ನಾನು ಸೋನಿಯಾ ಅವರಿಗೆ ಏನನ್ನೂ ಹೇಳಲಿಲ್ಲ. ಐಪಿಯು ಅಧ್ಯಕ್ಷ ಸ್ಥಾನಕ್ಕೆ ಹೆಸರನ್ನು ಕಳುಹಿಸುವ ಮುನ್ನ ಅವರ ಅನುಮತಿ ಪಡೆದುಕೊಂಡಿದ್ದೆ. ಆಗ ಅವರು ಆಶೀರ್ವದಿಸಿದ್ದರು' ಎಂದು ಹೇಳಿದ್ದಾರೆ.

'ಐಪಿಯು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ವಾಜಪೇಯಿ ಸರ್ಕಾರ ನನಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿತು. ಅಲ್ಲದೆ ಐಪಿಯು ಅಧ್ಯಕ್ಷರಿಗೆ ವಿವಿಧ ದೇಶಗಳಿಗೆ ಸಂಚರಿಸಲು ಬಜೆಟ್‌ನಲ್ಲಿ ₹ 1 ಕೋಟಿ ಮೀಸಲಿಟ್ಟಿತು' ಎಂಬುದನ್ನು ಅವರು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries