ಬದಿಯಡ್ಕ: ಬದಿಯಡ್ಕ ರೋಟರಿ ಕ್ಲಬ್‍ನ ನೇತೃತ್ವದಲ್ಲಿ ಏತಡ್ಕ ರಸ್ತೆಯ ವಿದ್ಯಾಗಿರಿ ಜಂಕ್ಷನ್‍ನಲ್ಲಿ ಕಾನ್ವೆಕ್ಸ್ ಮಿರರ್ ಅಳವಡಿಸಲಾಯಿತು. ರೋಟರಿ ಬದಿಯಡ್ಕದ ಅಧ್ಯಕ್ಷ ಬಿ.ಕೇಶವ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ವಾರ್ಡು ಸದಸ್ಯೆ ಶುಭಲತಾ ರೈ ಉದ್ಘಾಟಿಸಿದರು.
ರೋಟರಿ ಕಾರ್ಯದರ್ಶಿ ರಮೇಶ ಆಳ್ವ ಕಡಾರು, ಕೋಶಾಧಿಕಾರಿ ಗೋಪಾಲಕೃಷ್ಣ ಕಾಮತ್, ಉಪಾಧ್ಯಕ್ಷ ಗುರುಪ್ರಸಾದ್ ಶೆಣೈ, ಪ್ರಮುಖರಾದ ಜಗನ್ನಾಥ ರೈ, ಪ್ರತೀಕ್ ಆಳ್ವ, ಸುಧಾಕರ, ವಿವಿಧ ಪಕ್ಷಗಳ ಪ್ರಮುಖರಾದ ರಾಮಕೃಷ್ಣನ್, ಸರಸೀರುಜಾಕ್ಷನ್ ನಂಬಿಯಾರ್, ಲತೀಫ್, ಮನೋಹರನ್ ನಂಬಿಯಾರ್, ಶಿವಾನಂದ ರೈ, ಜಯಪ್ರಕಾಶ್ ರೈ ಮೊದಲಾದ ಮುಖಂಡರು ಭಾಗವಹಿಸಿದ್ದರು.