ಇಂಫಾಲ್: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಶಂಕಿತ ಬಂಡುಕೋರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
ಒಂದು ಗಂಟೆ ಕಾಲ ನಡೆದ ಈ ಗುಂಡಿನ ಚಕಮಕಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಶಾಂತಿಖೋಂಗ್ಬಲ್, ಯೈನ್ಗಾನ್‌ಪೋಕ್ಪಿ ಉಯೊಕ್ ಚಿಂಗ್ ಮತ್ತು ತಮ್ನಪೋಪ್ಕಿ ಉಯೊಕ್ ಚಿಂಗ್ ಎಂಬ ಗ್ರಾಮಗಳಲ್ಲಿ ಗುರುವಾರ ರಾತ್ರಿ ಅಪಚರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಲು ಪ್ರಾರಂಭಿಸಿದರು.
ಭದ್ರತಾ ಪಡೆಗಳು ಸಹ ಅವರನ್ನು ಓಡಿಸಲು ಕೆಲವು ಸುತ್ತು ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.