ಮಂಜೇಶ್ವರ: ಉದ್ಯಾವರ ತೋಟ ಜಿ.ಎಂ.ಎಲ್ ಪಿ ಶಾಲೆಯಲ್ಲಿ ಸಿರಿ ಧಾನ್ಯಗಳ ದಿನಾಚರಣೆಯನ್ನು ನಿನ್ನೆ ವೈವಿಧ್ಯಮಯವಾಗಿ ಆಚರಿಸಲಾಯಿತು. ಮಕ್ಕಳಿಗೆ ಸಿರಿ ಧಾನ್ಯಗಳ ಮಹತ್ವವನ್ನು ಶಾಲಾ ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಹಾಗೂ ಹಿರಿಯ ಶಿಕ್ಷಕ ರವಿಶಂಕರ ನೆಗಳಗುಳಿ ವಿವರಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ಲ ವಹಿಸಿದ್ದರು.
ಗ್ರಾ.ಪಂ. ಸದಸ್ಯೆ ಕುಲ್ಸುಮ್ಮ ಕಾರ್ಯಕ್ರಮ ಉದ್ಘಾಟಿಸಿದರು.ಮಸೀದಿಯ ಉಸ್ತಾದ್ ಅಹಮದ್ ಸ್ವಾದಿಕ್ ಶುಭಹಾರೈಸಿದರು.ಮಕ್ಕಳಿಗೆ ಸಿರಿ ಧಾನ್ಯ ಮತ್ತು ಅವುಗಳಿಂದ ತಯಾರಿಸುವ ತಿಂಡಿಗಳನ್ನೂ ಪ್ರದರ್ಶನಕ್ಕೆ ಇರಿಸಲಾಗಿತ್ತು. ಅಂಗನವಾಡಿ ಶಿಕ್ಷಕಿ ಪ್ರಮೀಳ, ಕನಕ, ಯೋಗಿನಿ ಹಾಗೂ ಮಕ್ಕಳು ಭಾಗವಹಿಸಿದ್ದರು ಶಿಕ್ಷಕ ಅಭಿಲಾಷ್ ರಾವ್ ಶುಭ ಹಾರೈಸಿದರು. ಶಿಕ್ಷಕರಾದ ರವಿಶಂಕರ ಸ್ವಾಗತಿಸಿ, ಗಾಯತ್ರಿ ಟೀಚರ್ ವಂದಿಸಿದರು