ಬದಿಯಡ್ಕ: ಕಾಸರಗೋಡು ಜಿಲ್ಲಾ ಸೀನಿಯರ್ ತ್ರೋ ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಪುರುಷರ ವಿಭಾಗದಲ್ಲಿ ನವಯುಗ ಸ್ಪೋಟ್ರ್ಸ್ ಕ್ಲಬ್ ಹಾಗೂ ಮಹಿಳೆಯರ ವಿಭಾಗದಲ್ಲಿ ಎಸ್. ಎ. ಪಿ. ಎಚ್. ಎಸ್ ಅಗಲ್ಪಾಡಿ ಚಾಂಪಿಯನ್‍ಶಿಪ್ ಪಡಕೊಂಡಿದೆ.
ನೀರ್ಚಾಲು ಶಾಲೆಯಲ್ಲಿ ಜರಗಿದ ಬಹುಮಾನ ವಿತರಣಾ ಸಮಾರಂಭವನ್ನು ನಿವೃತ್ತ ದೈಹಿಕ ಶಿಕ್ಷಕ ಬಶೀರ್ ಅಹಮದ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಕೆ. ಸೂರ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಸಂತೋಷ್ ಪಿ.ಎಚ್, ಸಂತೊï್ಷ ಕುಮಾರ್ ಮೊದಲಾದವರು ಶುಭಹಾರೈಸಿದರು. ಶಶಿಕಾಂತ್ ಜಿ. ಆರ್ ಬಹುಮಾನ ವಿತರಿಸಿದರು.