ಕಾಸರಗೋಡು: ಉದಿನೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದುಬರುತ್ತಿರುವ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕನ್ನಡ ಭಾಷೆಯನ್ನು ಪೂರ್ಣವಾಗಿ ನಿರ್ಲಕ್ಷಿಸಿರುವ ಬಗ್ಗೆ ಕನ್ನಡಾಭಿಮಾನಿಗಳು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ನೂರಾರು ಮಂದಿ ಕನ್ನಡ ಸ್ಪರ್ಧಾಳುಗಳು ಭಾಗವಹಿಸುತ್ತಿದ್ದರೂ, ಕನ್ನಡ ಭಾಷೆಗೆ ಅಗತ್ಯ ಪ್ರಾತಿನಿಧ್ಯ ನೀಡದೆ ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ. ಕಲೋತ್ಸವದ ನಗರಿಯಲ್ಲಿ ಒಟ್ಟು 12ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆದುಬರುತ್ತಿದ್ದು, ಯಾವುದೇ ವೇದಿಕೆಯಲ್ಲಿ ಕನ್ನಡದಲ್ಲಿ ನಾಮಫಲಕ ಅಳವಡಿಸಿರಲಿಲ್ಲ.ಕನ್ನಡದ ಸ್ಪರ್ಧೆ ನಡೆಯುವ ಒಂದು ವೇದಿಕೆ ವಠಾರದಲ್ಲಿ ಮಾತ್ರ 'ಪ್ಲಾಸ್ಟಿಕ್ ಮುಕ್ತ ವಠಾರ ಉದಿನೂರಿಗೆ ಸ್ವಣಾಭರಣ'ಎಂಬ ಫಲಕವೊಂದನ್ನು ಅಲವಡಿಸಿರುವುದು ಬಿಟ್ಟರೆ, ಉಳಿದ ವೇದಿಕೆಗಳಲ್ಲಿ ಕನ್ನಡವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂಬುದಾಗಿ ಹೆತ್ತವರು ಹಾಗೂ ಕನ್ನಡಾಭಿಮಾನಿಗಳು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಏಳು ಶೈಕ್ಷಣಿಕ ಉಪಜಿಲ್ಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಇವರಲ್ಲಿ ಕಾಸರಗೋಡು, ಕುಂಬಳೆ, ಮಂಜೇಶ್ವರ ಉಪಜಿಲ್ಲೆಗಳಿಂದಹೆಚ್ಚಿನ ಸಂಖ್ಯೆಯ ಕನ್ನಡ ಮಾಧ್ಯಮ ಸ್ಪರ್ಧಾಳುಗಳಿದ್ದಾರೆ. ಆದರೆ ಇವರಿಗೆ ಕನ್ನಡದಲ್ಲಿ ಸೂಚನೆಗಳನ್ನು ನೀಡಲು, ವೇದಿಕೆಗಳಲ್ಲಿ ಕನ್ನಡ ಫಲಕಗಳನ್ನುಅ ಲವಡಿಸಲು ಮುಂದಾಗದ ಜಿಲ್ಲಾ ಶಾಲಾ ಕಲೋತ್ಸವ ಆಯೋಜಕರ ವಿರುದ್ಧ ಕನ್ನಡಾಭಿಮಾನಿಗಳು ಕಿಡಿಕಾರಿದ್ದಾರೆ.