ಬದಿಯಡ್ಕ: ನೆಕ್ರಾಜೆ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 28,29ರಂದು ನಡೆಯಲಿರುವ ಶ್ರೀ ಶಿವಶಕ್ತಿ ಮಹಾಯಾಗದ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಬಿಡುಗಡೆಗೊಳಿಸಿದರು.
ಮಹಾಯಾಗ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕ ಪಿ.ಆರ್. ಸುನೀಲ್, ಆನುವಂಶಿಕ ಮೊಕ್ತೇಸರ ಪಿ.ಎಸ್. ಪುಣಿಂಚಿತ್ತಾಯ, ಸೇವಾಸಮಿತಿ ಅಧ್ಯಕ್ಷ ಪಿ. ಸೀತಾರಾಮ ರಾವ್, ಲೆಕ್ಕ ಪರಿಶೋಧಕ ನ್ಯಾಯವಾದಿ. ಕೃಷ್ಣರಾಜ್, ಉಪಾಧ್ಯಕ್ಷರುಗಳಾದ ಪಿ.ಗೋಪಾಲಾಚಾರಿ, ಪಿ.ಆರ್. ಗೋಪಾಲನ್, ರವಿಶಂಕರ್ ಪುಣಿಂಚಿತ್ತಾಯ, ಸೀತಾರತ್ನ ಕರೋಡಿ, ಸಂಚಾಲಕ ಜಯರಾಮ್ ಕೋಟೂರು, ದಿನೇಶ್ ಚಾಂಡಿಮೂಲ, ಜಯಚಂದ್ರ ಬಾಲಡ್ಕ, ಪ್ರಚಾರ ಸಮಿತಿ ಅಧ್ಯಕ್ಷ ಪಿ.ಉಣ್ಣಿಕೃಷ್ಣನ್, ರಮೇಶ ಮಾವಿನಕಟ್ಟೆ, ಸ್ವಯಂ ಸೇವಕ ಸಮಿತಿ ಅಧ್ಯಕ್ಷ ಎಸ್‍ಪಿ ಸಂತೋಷ ಚಂದ್ರಪಾರ, ಕಮಲೇಶ ಚಂದ್ರಪಾರ, ಕಚೇರಿ ಪ್ರಭಾರಿ ಕುಶಲ್ ಯಾದವ್, ಶಶಿಧರನ್ ನಾಯರ್, ಮಾತೃಸಮಿತಿ ಅಧ್ಯಕ್ಷೆ ಸುಜಾತಾ ಶಶಿಧರನ್, ಶಾಂತಕುಮಾರಿ ಟೀಚರ್, ಸರಸ್ವತಿ ಚಂದ್ರಪಾರ, ಮಾಲತಿ ಗೋಪಾಲನ್ ಕೌಶಿಕ್ ನೆಕ್ರಾಜೆ ಮೊದಲಾದವರು ಉಪಸ್ಥಿತರಿದ್ದರು.