ಬದಿಯಡ್ಕ: ಕುಂಬ್ಡಾಜೆ ಗ್ರಾಮದ ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನಗಳು 26 ವರ್ಷಗಳ ಬಳಿಕ ಡಿ. 22ರಿಂದ 30ರ ಪುನ:ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸ ಹಾಗೂ ಕಳಿಯಾಟ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರಿನಾರಾಯಣ ಶಿರಂತಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೆಳುತ್ತೇಡನ್ ಕುರುಪ್ ಸಮುದಾಯದವರ ಸ್ಥಾನಿಕ ಕಾರ್ಮಿಕತ್ವದಲ್ಲಿ ನಡೆಯುತ್ತಿರುವ ಈ ಕ್ಷೇತ್ರದ ಜೀರ್ಣೋದ್ಧಾರ ಕೆಲಸಗಳು ದೈವ ಭಕ್ತ ಮಹಾಶಯರ ಅವಿಶ್ರಾಂತ ಪರಿಶ್ರಮದ ಹಾಗೂ ಪ್ರಾರ್ಥನೆಯ ಪಲವಾಗಿ ಡಿ.22ರಿಂದ ಮೊದಲ್ಗೊಂಡು 25ರ ವರೆಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಕಾರ್ಮಿಕತ್ವದಲ್ಲಿ ಶ್ರೀ ದೈವಗಳ ಪುನರ್‍ಪ್ರತಿಷ್ಠಾ, ಬ್ರಹ್ಮಕಲಶಾಭಿಷೇಕ, ತದಾನಂತರ ಡಿ.30ರ ತನಕ ಶ್ರೀ ದೈವಗಳ ಕಳಿಯಾಟ ಮಹೋತ್ಸವವು ವಿವಿಧ ತಾಂತ್ರಿಕ, ಧಾರ್ಮಿಕ, ಅಧ್ಯಾತ್ಮಿಕ, ಕಲಾ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಇದರ ಯಶಸ್ವಿಗಾಗಿ ಪುನರ್‍ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಕಳಿಯಾಟ ಮಹೋತ್ಸವ ಸಮಿತಿಯನ್ನು ರಚಿಸಲಾಗಿತ್ಕು, ರಕ್ಷಾಧಿಕಾರಿಯಾಗಿ ಹರೀಶ್ ಕುಣಿಕುಳ್ಳಾಯ, ನಡುಮನೆ-ಉಬ್ರಂಗಳ, ಕ್ಷೇತ್ರ ಕಾರ್ನವರ್ ಶ್ರೀ ಜಯರಾಮ ನೆಲ್ಲಿಕುಂಜೆ, ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಪೈ, ಬದಿಯಡ್ಕ, ಅಧ್ಯಕ್ಷರಾಗಿ ಹರಿನಾರಾಯಣ ಮಾಸ್ಟರ್, ಶೀರಂತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಕುರುಪ್ ಮಾಸ್ಟರ್, ಉಬ್ರಂಗಳ ಕೋಶಾಕಾರಿಯಾಗಿ ಕುಞÂಕಣ್ಣನ್ ಉಳಿಯ, ತಂಬಾನ್ ಆನೆಕಲ್ಲು ಬಂದಡ್ಕ, ಸುನಿಲ್ ಕುಮಾರ್ ಅನಂತಪುರ, ಅಶೋಕನ್ ಅದೂರು ಮೊದಲಾದವರ ನೇತೃತ್ವದಲ್ಲಿ ಸಮಿತಿಯು ವಿವಿಧ ಉಪಸಮಿತಿಗಳನ್ನು ರಚಿಸಿ ಕಾರ್ಯಪ್ರವೃತ್ತಗೊಳಿಸಲಾಗಿದೆ.
ಡಿ.22ರಂದು ಎಡನೀರು ಮಠಾೀಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಭಾ ಕಾರ್ಯಕ್ರಮ ಉದ್ಘಾಟನೆ ಹಾಗೂ ಆಶೀರ್ವಚನ ನೀಡುವರು. ಡಿ.25ರಂದು ನಡೆಯುವ ಧಾರ್ಮಿಕ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸುವರು. ಡಿ.26ರಂದು ಪ್ರಥಮ ಕಳಿಯಾಟ ಆರಂಭಗೊಂಡು ಡಿ.30ರಂದು ಶ್ರೀ ಚೌಕಾರು ಗುಳಿಗ ದೈವನರ್ತನದೊಂದಿಗೆ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಾರೋಪಗೊಳ್ಳುವುದು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕುರುಪ್ ಮಾಸ್ಟರ್, ಕುಂಞÂಕಣ್ಣ ಉಳಿಯ, ತಂಬಾನ್ ಆನೆಕಲ್ಲು, ಸುನಿಲ್ ಕುಮಾರ್ ಅನಂತಪುರ, ಅಖಿಲೇಶ್ ನಗುಮುಖಂ, ಅಶೋಕನ್ ಅದೂರು ಉಪಸ್ಥಿತರಿದ್ದರು.