HEALTH TIPS

ಮಂಜೇಶ್ವರ ಷಷ್ಠಿ ಉತ್ಸವ-ಸಾವಿರಾರು ಭಕ್ತರಿಂದ ತೇರು ವೀಕ್ಷಣೆ

ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಾಲಯವೆಂದೇ ಖ್ಯಾತಿವೆತ್ತ ಮಂಜೇಶ್ವರ ಶ್ರೀಮದ್.ಅನಂತೇಶ್ವರ ದೇವಳದ ವಾರ್ಷಿಕ ಷಷ್ಠಿ ಉತ್ಸವ  ಡಿ.02 ರಂದು ಆರಂಭಗೊಂಡಿದ್ದು, ಇತಿಹಾಸ ಪ್ರಸಿದ್ದ ಷಷ್ಠೀ ತೇರು ಶನಿವಾರ ಸಾವಿರಾರು ಭಕ್ತರ ಸಮ್ಮುಖನದಲ್ಲಿ ನಡೆಯಿತು.

ಡಿ.6 ರಂದು ಶುಕ್ರವಾರ ಬೆಳಿಗ್ಗೆ 9.30ಕ್ಕೆ ಸ್ವರ್ಣಲಾಲ್ಕಿ ಹಗಲು ಉತ್ಸವ, ಮಧ್ಯಾಹ್ನ 1ಕ್ಕೆ ಪ್ರಾರ್ಥನೆ, 3.30ರ ವರೆಗೆ ಅಭಿಷೇಕ, ತುಲಾಭಾರ, ಸಂಜೆ 5.ಕ್ಕೆ ಮಹಾಪೂಜೆ, 5.30ಕ್ಕೆ ದೇವ ದರ್ಶನದ ಪ್ರಾರ್ಥನೆ, 6ಕ್ಕೆ ಯಜ್ಞ, ಸಂಜೆ 7.30ಕ್ಕೆ ಯಜ್ಞಾರತಿ, ಬಲಿ, ರಾತ್ರಿ 8 ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 12.30ರಿಂದ ಶನಿವಾರ ಮುಂಜಾನೆ 5ರ ವರೆಗೆ ಬೆಳ್ಳಿಲಾಲ್ಕಿಯಲ್ಲಿ ಮೃಗಬೇಟೆ, ಅಡ್ಡಪಲ್ಲಂಕಿ, ಸಣ್ಣ ರಥೋತ್ಸವ, ವಸಂತಪೂಜೆ, ಮಂಗಳಾರತಿ ನಡೆಯಿತು.


ನಿನೆ (ಶನಿವಾರ) ಬೆಳಿಗ್ಗೆ 10 ರಿಂದ 12ರ ವರೆಗೆ ಧರ್ಮ, 12.30ಕ್ಕೆ ಮಹಾಪೂಜೆ, 1ಕ್ಕೆ ಯಜ್ಞ, 3.30 ರಿಂದ ಪೂರ್ಣಾಹುತಿ, ಸಂಜೆ 4ಕ್ಕೆ ಯಜ್ಞಾರತಿ, ಸ್ವರ್ಣ ವಾಹನದಲ್ಲಿ ಬಲಿ ಉತ್ಸವ, ರಥಾರೋಹಣಕ್ಕೆ ಹೊರಡುವುದು, 5ಕ್ಕೆ ರಥಾರೋಹಣ, ರಾತ್ರಿ 8.30ಕ್ಕೆ ರಥಾವರೋಹಣ, 9.30ಕ್ಕೆ ಮಂಗಳಾರತಿ, ಸಮಾರಾಧನೆ ನಡೆಯಿತು. 

ಇಂದು ಡಿ.8 ರಂದು ಭಾನುವಾರ ಮಧ್ಯಾಹ್ನ 1.30ಕ್ಕೆ ಅವಭೃತ, ಅಪರಾಹ್ನ 2.30ರಿಂದ 4.30.ರ ವರೆಗೆ ಮರದ ಲಾಲ್ಕಿ ಸಣ್ಣ ರಥೋತ್ಸವಗಳು, 5ಕ್ಕೆ ಶೇಷತೀರ್ಥ ಸ್ನಾನ, 6ಕ್ಕೆ ಧ್ವಜಾವರೋಹಣ, 7ಕ್ಕೆ ಗಡಿ ಪ್ರಸಾದ ವಿತರಣೆ, ರಾತ್ರಿ 10ಕ್ಕೆ ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆ ನಡೆಯಲಿದೆ. ಶ್ರೀಕಿರುಷಷ್ಠಿ ಜಾತ್ರೆ ಡಿ.31 ರಿಂದ ಜನವರಿ.5ರ ವರೆಗೆ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries