HEALTH TIPS

ಆಕ್ರಮಣಕಾರರಿಂದ ನಾಶವಾದ ಸಂಸ್ಕøತಿಯ ಕೇಂದ್ರಗಳನ್ನು ಪುನಃಸ್ಥಾಪಿಸಿದವರು ದೇವಿ ಅಹಲ್ಯಾ- ಸ್ಮೃತಿ ಇರಾನಿ

ಕೊಚ್ಚಿ: ಎರ್ನಾಕುಳಂನಲ್ಲಿ ಹೋಳ್ಕರ್ ಜಯಂತಿ ತ್ರಿಶತಮಾನೋತ್ಸವ ಆಚರಣೆಗೆ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿ ಚಾಲನೆ ದೊರೆಯಿತು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ, ಅಹಲ್ಯಾಬಾಯಿ ಜಯಂತಿ ಶೌರ್ಯದ ದಂತಕಥೆಯಾಗಿದ್ದು, ಇದನ್ನು ಸ್ವಾರ್ಥಿ ರಾಜಕೀಯ ಇತಿಹಾಸ ಲೇಖಕರು ನಿರ್ಲಕ್ಷಿಸಿದ್ದಾರೆ ಎಂದರು.

ಸನಾತನ ಧರ್ಮಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮೇಧಾವಿಗಳನ್ನು ಕೆಲವರು ಉದ್ದೇಶಪೂರ್ವಕವಾಗಿ ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಯತ್ನಿಸಿದರು. ಅಹಲ್ಯಾ ಅವರಂತಹ ಭಾರತೀಯ ವೀರ ಮಹಿಳೆಯರ ಕೊಡುಗೆ ಮತ್ತು ಆಡಳಿತ ಕೌಶಲ್ಯವನ್ನು ಅವರು ನಮ್ಮ ತಲೆಮಾರುಗಳಿಂದ ಮರೆಮಾಡಿದ್ದಾರೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಇದು ಟಿಪ್ಪು ಸುಲ್ತಾನ್ ರ ಜನ್ಮ ದಿನಾಚರಣೆ ಆಚರಿಸಿದ ನಾಡು. ಆದರೆ ಅಹಲ್ಯಾ ಬಾಯಿಯವರಿಗೆ ತಿಳಿಯುವ ಮತ್ತು ತಿಳಿಸುವ ಪ್ರಯತ್ನ ಮಾಡಬೇಕಿದೆ. ಆಕ್ರಮಣಕಾರರಿಂದ ನಾಶವಾದ ಸಂಸ್ಕೃತಿಯ ಕೇಂದ್ರಗಳನ್ನು ಅಹಲ್ಯಾಬಾಯಿ ಪುನಃಸ್ಥಾಪಿಸಿದರು. ಕಾಶಿ ವಿಶ್ವನಾಥ ದೇವಾಲಯ, ಕೇದಾರನಾಥ, ಉಜ್ಜಯಿನಿ ಮೊದಲಾದ ದೇಶದ 1100ಕ್ಕೂ ಹೆಚ್ಚು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ.

ಒಬ್ಬ ದೊರೆ ಹೇಗಿರಬೇಕು ಎಂಬುದಕ್ಕೆ ದೇವಿ ಅಹಲ್ಯಾ ಉದಾಹರಣೆ. ಜನಕಲ್ಯಾಣ, ಸಮಾನ ನ್ಯಾಯ ಮತ್ತು ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಮಾದರಿಯಾಗಿದ್ದಾರೆ. ಈ ರಾಜ್ಯದಲ್ಲಿರುವ ಸಕಲ ಜೀವರಾಶಿಗಳಿಗೆ ನಾನೇ ರಾಣಿ ಎಂದು ಕರೆದು ಅತ್ಯುತ್ತಮ ಸೈನ್ಯವನ್ನು ಸೃಷ್ಟಿಸಿ ಮುನ್ನಡೆಸಿದರು. ದೇವಿ ಅಹಲ್ಯಾ ಅವರ ವೀರ ಜೀವನ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಮಹಿಳಾ ಸಂಘ ವೇದಿಕೆ ಜಿಲ್ಲಾಧ್ಯಕ್ಷೆ ವಂದನಾ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.

ಡಾ. ಚಿತ್ತಾರ ಕೆ., ಡಾ. ಆಶಲತಾ, ಚಿನ್ಮಯ ಮಿಷನ್ ನ ಬ್ರಹ್ಮಚಾರಿಣಿ ದೇವಕಿ ಚೈತನ್ಯ, ಸಜ್ರ ಸಮಿತಿ ಕಾರ್ಯದರ್ಶಿ ಎಸ್.ಜೆ.ಆರ್. ಕುಮಾರ್, ರಾಷ್ಟ್ರ ಸೇವಿಕಾ ಸಮಿತಿ ಜಿಲ್ಲಾ ಆಡಳಿತ ಅಧಿಕಾರಿ ಅಡ್ವ. ಶ್ರೀಕಲಾ ಕೆ.ಎಲ್., ಕಾರ್ಯಕಾರಿ ಸಮಿತಿ ಸದಸ್ಯೆ ಜಿ. ಮಹೇಶ್ವರಿ, ಭಾರತೀಯ ವಿಚಾರಕೇಂದ್ರಂ ರಾಜ್ಯ ಸಮಿತಿ ಸದಸ್ಯ ಕೆ.ವಿ. ರಾಜಶೇಖರನ್, ವಿಎಚ್‍ಪಿ ರಾಜ್ಯ ಉಪಾಧ್ಯಕ್ಷ ಪ್ರಸನ್ನ ಬಾಹುಲೇಯನ್, ಆರ್‍ಎಸ್‍ಎಸ್ ದಕ್ಷಿಣ ಕೇರಳ ಪ್ರಾಂತ ಬೌದ್ಧಿಕ್ ಪ್ರಮುಖ್ ಪಿ. ಉಣ್ಣಿಕೃಷ್ಣನ್ ಮತ್ತಿತರರು ಭಾಗವಹಿಸಿದ್ದರು.

ಉತ್ಸವದ ಪೂರ್ವಭಾವಿಯಾಗಿ ಮರೈನ್ ಡ್ರೈವ್‍ನಿಂದ ಆರಂಭವಾದ ಶೋಭಾಯಾತ್ರೆಯಲ್ಲಿ ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು. ಅಹಲ್ಯಾಬಾಯಿ ಹೋಳ್ಕರ್ ವೇಷ ಧರಿಸಿದ ಬಾಲಕಿಯರು ಮೆರವಣಿಗೆಗೆ ಮೆರುಗು ನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries